ಕಾರವಾರ ನೌಕಾನೆಲೆಯ ರಹಸ್ಯ ಸಂಗತಿಗಳನ್ನು ಪಾಕಿಸ್ತಾನಕ್ಕೆ ರವಾನಿಸಿದವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
ಕಾರವಾರ ನೌಕಾನೆಲೆಯ ರಹಸ್ಯ ಸೋರಿಕೆ ಪ್ರಕರಣದಲ್ಲಿ ಈವರೆಗೆ ಒಟ್ಟು 6 ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ ಶಿಕ್ಷೆ ವಿಧಿಸಲಾಗಿದೆ. ಕಾರವಾರದ ಆಯಕಟ್ಟಿನ ನೌಕಾನೆಲೆ ಸೇರಿದಂತೆ ಭಾರತೀಯ ನೌಕಾಪಡೆಗಳಲ್ಲಿ ವಿದೇಶಿ ಗೂಢಚಾರರು ದೇಶದ ಏಕತೆ, ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಬೇಹುಗಾರಿಕೆ ನಡೆಸಿದ್ದ ತನಿಖೆಯಲ್ಲಿ ಈ ಆರೋಪ ಸಾಭೀತಾಗಿದೆ.
ಸದ್ಯ ಆಂದ್ರ ಪ್ರದೇಶದ ವಿಶಾಖ ಪಟ್ಟಣಂನಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯವು ವಿಶಾಖಪಟ್ಟಣಂ ಜಿಲ್ಲೆಯ ಕಲವಲಪಲ್ಲಿಯ ಕೊಂಡ ಬಾಬು ಮತ್ತು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಅವಿಯಾನ್ಸ್ ಸೋಮಲ್ ಅವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ ದಂಡ ವಿಧಿಸಿದೆ. ದಂಡ ಪಾವತಿ ಮಾಡದಿದ್ದರೆ ಹೆಚ್ಚುವರಿ 1 ವರ್ಷ ಜೈಲು ಶಿಕ್ಷೆಯನ್ನು ಘೋಷಿಸಿದೆ.
ಈಗ ಶಿಕ್ಷೆಗೊಳಗಾದ ಇಬ್ಬರು ಆರೋಪಿಗಳನ್ನು 2019ರ ಡಿಸೆಂಬರ್ನಲ್ಲಿ ಮುಂಬೈ ಹಾಗೂ ಕಾರವಾರದಲ್ಲಿ ಬಂಧಿಸಲಾಗಿತ್ತು. ಬಂಧಿತರು ವಾಟ್ಸಪ್ ಮೂಲಕ ವಿದೇಶಿ ಗುಪ್ತಚರ ಸಂಸ್ಥೆಗಳೊAದಿಗೆ ಸಂಪರ್ಕದಲ್ಲಿರುವುದು ಸಾಭೀತಾಗಿತ್ತು.