ಕಾರವಾರದಲ್ಲಿ ಕಲರ್ ಬಾಲ್ ಆಡುತ್ತಿದ್ದ ಮೂವರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಆ ಮೂಲಕ ಕಲರ್ ಬಾಲ್ ಆಡುವುದು ಅಪರಾಧ ಎಂದು ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
Advertisement. Scroll to continue reading.
ನವೆಂಬರ್ 16ರ ರಾತ್ರಿ ಕಾರವಾರದ ನೀತಿಸಾವರ ಬಳಿ ಜೂಜಾಟ ನಡೆಯುತ್ತಿತ್ತು. ನಾರಾಯಣ ದೇವಾಲಯದ ಹಿಂದೆ ಮೂವರು ಕಲರ್ ಬಾಲ್ ಆಡಿಸುತ್ತಿದ್ದರು. ಮಲ್ಲಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಅದನ್ನು ನೋಡಿದರು. ಪಿಎಸ್‌ಐ ಮಲ್ಲಿಕಾರ್ಜುನ ಕೊರಾಣಿ ಅವರಿಗೆ ವಿಷಯ ಮುಟ್ಟಿಸಿದರು.
ಪಿಎಸ್‌ಐ ಮಲ್ಲಿಕಾರ್ಜುನ ಕೊರಾಣಿ ಅವರು ದೇಗುಲದ ಬಳಿ ಬಂದರು. ವೈಲವಾಡದ ಉಲ್ಲಾಸ ಲಕ್ಷಣ ಮಾಳಸೆಕರ್, ದಿಗಾಳಿ ಕಿನ್ನರದ ಸಂದೀಪ ರಾಮದಾಸ ನಾಯ್ಕ ಹಾಗೂ ಕಿನ್ನರದ ಕಲ್ಪೇಶ ಕೃಷ್ಣಾನಂದ ತಳ್ಳೇಕರ್ ಅವರು ಕಲರ್ ಬಾಲ್ ಆಟದಲ್ಲಿ ನಿರತರಾಗಿದನ್ನು ದೃಢಪಡಿಸಿದರು. ಅವರ ಮೇಲೆ ದಾಳಿ ನಡೆಸಿ 2700ರೂ ಹಣವನ್ನು ವಶಕ್ಕೆಪಡೆದರು.
ಈ ದಾಳಿಯಲ್ಲಿ ಹಣದ ಜೊತೆ ಜೂಜಾಟಕ್ಕೆ ಬಳಸಿದ ಆರು ಬಣ್ಣದ ಮನೆಗಳ ಬಾಕ್ಸು, 30 ಪ್ಲಾಸ್ಟಿಕ್ ಕಾಯಿನ್, ಹಳೆಯ ಪತ್ರಿಕೆ ಹಾಗೂ ಇನ್ನಿತರ ಸಲಕರಣೆಗಳು ಸಿಕ್ಕವು. ಅವೆಲ್ಲವನ್ನು ಜಪ್ತು ಮಾಡಿ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿದರು.