ಮೇಷ ರಾಶಿ: ನಿಮ್ಮ ಉತ್ಸಾಹ ಹೆಚ್ಚಾಗಲಿದೆ. ಕಾರ್ಯಕ್ಷೇತ್ರದಲ್ಲಿ ಪಾಲ್ಗೊಳ್ಳುವ ಅವಕಾಶಗಳು ಸಿಗುತ್ತವೆ. ಹಣಕಾಸಿನಲ್ಲಿ ಅನಿವಾರ್ಯ ವೆಚ್ಚಗಳು ಮುಂದೆ ಬರುತ್ತವೆ.
ವೃಷಭ ರಾಶಿ: ನಿಮ್ಮ ಯೋಜನೆಗಳು ಯಶಸ್ಸು ತರುವ ಸಾಧ್ಯತೆ ಇದೆ. ಅನಿರೀಕ್ಷಿತ ವೆಚ್ಚಗಳು ಎದುರಾಗಬಹುದು. ಕುಟುಂಬ ಸದಸ್ಯರೊಂದಿಗೆ ಹಣಕಾಸು ಬಗ್ಗೆ ಚರ್ಚಿಸಿ. ಉದ್ಯೋಗದಲ್ಲಿ ಒಳ್ಳೆಯ ಹೆಸರು ಸಿಗಲಿದೆ. ಪ್ರಯಾಣದ ಸಾಧ್ಯತೆ ಇದೆ.
ಮಿಥುನ ರಾಶಿ: ನಿಮಗೆ ಸಿಕ್ಕ ಅವಕಾಶ ಬಳಸಿಕೊಳ್ಳಿ. ಚಂಚಲ ಮನಸ್ಸಿನಿಂದ ಹಾನಿಯೇ ಹೆಚ್ಚಲಿದೆ. ಹಣಕಾಸಿನಲ್ಲಿ ಜಾಗರೂಕತೆ ಅಗತ್ಯ. ಸ್ನೇಹಿತರ ಸಲಹೆಗಳನ್ನು ಗೌರವಿಸಿ.
ಕರ್ಕ ರಾಶಿ: ಉದ್ಯೋಗದಲ್ಲಿ ದೊಡ್ಡ ಬದಲಾವಣೆಗಳಿರುವುದಿಲ್ಲ. ಕ್ರಮಬದ್ಧ ಕಾರ್ಯಗಳಿಗೆ ಬೆಲೆ ಸಿಗಲಿದೆ. ಹಣಕಾಸಿನಲ್ಲಿ ಸ್ಥಿರತೆ ಸಾಧ್ಯವಿದೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ.
ಸಿಂಹ ರಾಶಿ: ಮಹತ್ವದ ನಿರ್ಧಾರ ತೆಗೆದುಕೊಳ್ಳುವ ದಿನ ಇದಾಗಿದೆ. ಮನಸ್ಸು ಖುಷಿಯಾಗಿರುತ್ತದೆ. ಕೆಲಸಗಾರರಿಗೆ ತೊಂದರೆ ಇಲ್ಲ. ಹಣ ಲಾಭ ಆಗಲಿದೆ.
ಕನ್ಯಾ ರಾಶಿ: ನಿಮ್ಮ ಕೆಲಸದ ನಿರ್ಧಾರದ ಮೇಲೆ ಯಶಸ್ಸು ನಿಂತಿದೆ. ಪರಿಶ್ರಮದಿಂದ ಮಾಡಿದ ಕೆಲಸ ಸರಿಯಾಗಿ ಸಾಗಲಿದೆ. ಹಿರಿಯರ ಸಲಹೆಯಿಂದ ದಾರಿ ಸುಗಮವಾಗಲಿದೆ.
ತುಲಾ ರಾಶಿ: ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆ ಲಭ್ಯ. ಹಣಕಾಸಿನಲ್ಲಿ ಏರಳಿತ ಆಗಲಿದೆ. ಮಕ್ಕಳಿಗೆ ಕೆಲ ಸಮಸ್ಯೆ ಎದುರಾಗಬಹುದು. ಸ್ನೇಹಿತರ ಪ್ರೋತ್ಸಾಹ ಸಿಗಲಿದೆ.
ವೃಶ್ಚಿಕ ರಾಶಿ: ಈ ದಿನ ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಕುಟುಂಬದ ಸದಸ್ಯರಿಂದ ಬೆಂಬಲ ಸಾಧ್ಯವಿದೆ. ಆರೋಗ್ಯದಲ್ಲಿ ಜಾಗರೂಕತೆ ಅಗತ್ಯ. ಪ್ರಯಾಣದ ಸಾಧ್ಯತೆ ಇದೆ.
ಧನು ರಾಶಿ: ಉದ್ಯೋಗಸ್ಥರಿಗೆ ಅಲ್ಪ ಒತ್ತಡ ಸಹಜ. ಹಣಕಾಸಿನಲ್ಲಿ ಸಮತೋಲನ ಅಗತ್ಯ. ಕೆಲಸದಲ್ಲಿ ಪ್ರತಿಫಲ ಸಿಗಬಹುದು. ಕುಟುಂಬದಲ್ಲಿ ಸಂತೋಷ ಮನೆಮಾಡುತ್ತದೆ.
ಮಕರ ರಾಶಿ: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ. ಹಣಕಾಸಿನಲ್ಲಿ ನಿರೀಕ್ಷಿತ ಲಾಭ ಆಗಲಿದೆ. ಪ್ರಯಾಣ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಮುನ್ನಡೆ ಸಾಧ್ಯವಿದೆ.
ಕುಂಭ ರಾಶಿ: ನಿಮ್ಮ ಯೋಜನೆಗಳು ಯಶಸ್ವಿಯಾಗಲಿದೆ. ಹಣಕಾಸಿನಲ್ಲಿ ಮುನ್ನಡೆ ಸಾಧ್ಯವಿದೆ. ಕುಟುಂಬದಲ್ಲಿ ಸೌಹಾರ್ದತೆ ಬೆಳೆಸಿಕೊಳ್ಳಿ.
ಮೀನ ರಾಶಿ: ಉತ್ಸಾಹದಿಂದ ಕೆಲಸ ಪ್ರಾರಂಭಿಸಿ. ಹಣಕಾಸಿಗೆ ಪೂರಕ ದಿನವಾಗಿರಲಿದೆ. ಹೊಸ ಸಂಪರ್ಕಗಳು ಸಮಸ್ಯೆ ದೂರ ಮಾಡಲಿದೆ. ಪ್ರಯಾಣದ ಲಕ್ಷಣವಿದೆ.