ಭೂಸಾರ ಸಂರಕ್ಷಣೆ, ಕೃಷಿ ಅರಣ್ಯ ರಕ್ಷಣೆ, ದೇವರ ಕಡು ಅಧ್ಯಯನ ಹಾಗೂ ಔಷಧಿ ಸಸ್ಯಗಳ ಕುರಿತಾದ ಜ್ಞಾನಕ್ಕಾಗಿ ಶಿರಸಿಯ ಸ್ಕೊಡ್‌ವೆಸ್ ಸಂಸ್ಥೆಗೆ ಪರಿಸರ ಪ್ರಶಸ್ತಿ ಸಿಕ್ಕಿದೆ.
Advertisement. Scroll to continue reading.
Advertisement. Scroll to continue reading.
Advertisement. Scroll to continue reading.
ಪರಿಸರ ಮತ್ತು ಜೀವವೈವಿದ್ಯ ಕ್ಷೇತ್ರದ ಸಾಧಕ ಸಂಸ್ಥೆಗಳಿಗೆ ನೀಡುವ `ಚೇಂಜ್ ಮೇಕರ್’ ಪ್ರಶಸ್ತಿಗೆ ಶಿರಸಿಯ ಸ್ಕೊಡ್‌ವೆಸ್ ಸಂಸ್ಥೆ ಪಾತ್ರವಾಗಿದೆ. ಹೈದರಾಬಾದಿನನ ಸಿಎಸ್‌ಆರ್‌ನೌ ವೇದಿಕೆಯೂ ಈ ಪ್ರಶಸ್ತಿ ಘೋಷಿಸಿದೆ. ಜಲಾನಯನ, ಭೂಸಾರ ಸಂರಕ್ಷಣೆ, ಕೃಷಿ ಅರಣ್ಯ, ದೇವರ ಕಾಡು, ಔಷಧಿ ಸಸ್ಯಗಳ ಸಂರಕ್ಷಣೆ, ಪರಿಸರ ಸಂರಕ್ಷಣೆಯಲ್ಲಿ ಸ್ಕೋಡ್‌ವೆಸ್ ಸಂಸ್ಥೆ ಮಾಡಿದ ಸಾಧನೆ ಗಮನಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ನವೆಂಬರ್ 10ರಂದು ಹೈದರಾಬಾದಿನ ಶಿಲ್ಪ ಕಲಾ ವೇದಿಕೆಯಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ. ದಕ್ಷಿಣ ಭಾರತದ ಅತಿ ದೊಡ್ಡ ಸಿಎಸ್‌ಆರ್ ಶೃಂಗ ಸಭೆಯಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರು ಭಾಗವಹಿಸಲಿದ್ದು, ಅದೇ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ವಿಷಯದ ಬಗ್ಗೆ ಇದೀಗ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ನಾರಾಯಣ ಹೆಗಡೆ ಅವರು ಮಾಹಿತಿ ನೀಡಿದರು.