ಬೆಂಗಳೂರಿನಲ್ಲಿ ವಾಸವಾಗಿದ್ದ ಶಿರಸಿಯ ಪ್ರಮೋದಾ ನಾಯ್ಕ ಅವರು ಕೊಲೆಯಾಗಿದ್ದಾರೆ. ಅಲ್ಲಿನ ಪೊಲೀಸರು ಕೊಲೆಗಾರರ ಹುಡುಕಾಟ ನಡೆಸಿದ್ದಾರೆ.
ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಗಸAದ್ರದಲ್ಲಿ ಪ್ರಮೋದಾ ನಾಯ್ಕ (37) ಅವರು ವಾಸವಾಗಿದ್ದರು. ಸಿದ್ದಾಪುರ ಮೂಲದ ಸುರೇಶ ಎಂಬಾತರನ್ನು ಅವರು ಮದುವೆ ಆಗಿದ್ದರು. ದಾಂಪತ್ಯದಲ್ಲಿ ಬಿರುಕು ಮೂಡಿದ ಕಾರಣ ಪತಿಯಿಂದ ಪ್ರತ್ಯೇಕವಾಗಿ ಅವರು ವಾಸವಾಗಿದ್ದರು.
ಗಾರ್ಮೆಂಟ್ಸ ಒಂದರಲ್ಲಿ ಪ್ರಮೋದಾ ನಾಯ್ಕ ಅವರು ಕೆಲಸ ಮಾಡಿಕೊಂಡಿದ್ದರು. ಸೋಮವಾರ ರಾತ್ರಿ ಅವರ ಕೊಲೆ ನಡೆದಿರುವುದು ಗೊತ್ತಾಗಿದೆ. ಅನೈತಿಕ ಸಂಬAಧದ ಸಂಶಯವೇ ಈ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಪ್ರಮೋದಾ ನಾಯ್ಕ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ದುಷ್ಕರ್ಮಿಗಳು ಪ್ರಮೋದಾ ನಾಯ್ಕ ಅವರ ಮನೆಗೆ ನುಗ್ಗಿ ಮಾರಕ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಆ ನೋವಿಗೆ ಅವರು ಅಲ್ಲಿಯೇ ಸಾವನಪ್ಪಿದ್ದಾರೆ. ರಾತ್ರಿಯೇ ದುಷ್ಕರ್ಮಿಗಳು ಪರಾರಿಯಾಗಿದ್ದು, ತನಿಖೆ ಮುಂದುವರೆದಿದೆ.