ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಅರಬ್ಬಿ ಸಮುದ್ರಕ್ಕೆ ತೆರಳಿದಾಗ ಕೊಂತಿ ಮೀನು ಚುಚ್ಚಿ ಸಾವನಪ್ಪಿದ್ದ ಕಾರವಾರದ ಮೀನುಗಾರನ ಕುಟುಂಬಕ್ಕೆ ಸರ್ಕಾರ ಸ್ಪಂದಿಸಿದೆ. ಈ ದಿನ ಸಂತ್ರಸ್ತರಿಗೆ ಸರ್ಕಾರ 10 ಲಕ್ಷ ರೂ ಪರಿಹಾರದ ಚೆಕ್ ವಿತರಿಸಿ ಸಾಂತ್ವಾನ ಹೇಳಿದೆ.
ಕೆಲ ಸಮಯದ ಮೊದಲು ಮೊಬೈಲ್ ಮಿಡಿಯಾ ನೆಟ್‌ವರ್ಕ ಮೀನುಗಾರನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಸಿಗದ ಬಗ್ಗೆ ವರದಿ ಪ್ರಕಟಿಸಿತ್ತು. ಅದರ ಬೆನ್ನಲ್ಲೆ ಸರ್ಕಾರದಿಂದ ಮೀನುಗಾರನ ಕುಟುಂಬಕ್ಕೆ ಬುಧವಾರ ಪರಿಹಾರದ ಚೆಕ್ ವಿತರಿಸಿದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರವಾರ ತಾಲೂಕಿನ ಮಾಜಾಳಿ ಗ್ರಾಮದ ಮೀನುಗಾರ ಅಕ್ಷಯ್ ಮಾಜಾಳಿಕರ್ ಅವರ ಕುಟುಂಬಕ್ಕೆ ಶಾಸಕ ಸತೀಶ್ ಸೈಲ್ ಅವರು ಸಾಂತ್ವಾನ ಹೇಳಿದ್ದಾರೆ. ಮೀನುಗಾರರ ಮನೆಗೆ ಭೇಟಿ ನೀಡಿದ ಅವರು ವೈಯಕ್ತಿಕವಾಗಿಯೂ ನೆರವು ನೀಡಿದ್ದಾರೆ. ಜೊತೆಗೆ ಮೀನುಗಾರಿಕಾ ಇಲಾಖೆಯವರು ಈ ದಿನ ಅವರ ಮನೆಗೆ ಭೇಟಿ ನೀಡಿ 10 ಲಕ್ಷ ರೂ ಮೌಲ್ಯದ ಚೆಕ್ ವಿತರಿಸಿದ್ದಾರೆ.

This will close in 6 seconds
You cannot copy content of this page