ಭಟ್ಕಳದ ವಂಡರಲ್ಯಾoಡ್ ರೆಸಾರ್ಟಿನ ಈಜುಕೊಳದಲ್ಲಿ ಬಿದ್ದು 4 ವರ್ಷದ ಮಗು ಸಾವನಪ್ಪಿದೆ. ನೀರಿನಲ್ಲಿ ಮುಳುಗಿದ ಮಗುವನ್ನು ಲೈಫ್ ಕೇರ್ ಆಸ್ಪತ್ರೆಗೆ ಕರೆತಂದರೂ ಬದುಕಿಸಿಕೊಳ್ಳಲು ಆಗಲಿಲ್ಲ.
ನವೆಂಬರ್ 20ರಂದು ಭಟ್ಕಳ ಜಾಲಿಯ ಗುಳ್ಮೀಯ ಅಬುಜಾ ಮದರಸಾ ಮಕ್ಕಳು ಪ್ರವಾಸಕ್ಕಾಗಿ ರೆಸಾರ್ಟಿಗೆ ಹೋಗಿದ್ದರು. ಮಕ್ಕಳ ಪಾಲಕರ ಜೊತೆ ಶಿಕ್ಷಕರು ಸಹ ಈ ಪ್ರವಾಸದಲ್ಲಿದ್ದರು. ಬೆಳಗ್ಗೆಯಿಂದ ಸಂಜೆಯವರೆಗೂ ಮಕ್ಕಳು ಅಲ್ಲಿ ಖುಷಿ ಅನುಭವಿಸಿದ್ದರು. ಜಾಲಿಯ ಆಜಾದ ನಗರದ ಮಹಮದ್ ಶಾಹಿದುಲ್ಲಾ ಅವರ ಪುತ್ರ ಮಸ್ತಕೀಮ್ (4) ಸಹ ತಮ್ಮ ತಾಯಿ ಜೊತೆ ರೆಸಾರ್ಟಿನಲ್ಲಿ ಕಾಲ ಕಳೆದಿದ್ದರು.
ಸಂಜೆ 5 ಗಂಟೆ ಸುಮಾರಿಗೆ ಮಕ್ಕಳೆಲ್ಲರೂ ರೆಸಾರ್ಟಿನ ಈಜುಕೊಳ ಪ್ರವೇಶಿಸಿದರು. ಅಲ್ಲಿಯೂ ಎಲ್ಲಾ ಮಕ್ಕಳು ಉತ್ಸಾಹದಿಂದ ಆಟವಾಡುತ್ತಿದ್ದರು. ಹೀಗಿರುವಾಗ ಮಸ್ತಕೀಮ್ ಅವರು ನೀರಿನೊಳಗೆ ಒಮ್ಮೆಗೆ ಕಾಲು ಜಾರಿ ಬಿದ್ದರು. ಅವರನ್ನು ಅಲ್ಲಿಂದ ತಕ್ಷಣ ಮೇಲೆತ್ತಲು ಸಾಧ್ಯವಾಗಲಿಲ್ಲ. ಈಜುಕೊಳದಲ್ಲಿ ತಲೆ ಕೆಳಗಾಗಿ ಬಿದ್ದ ಅವರು ಅಲ್ಲಿದ್ದ ನೀರು ಕುಡಿದರು. ಅದರಿಂದ ಅಸ್ವಸ್ಥರಾದ ಮಸ್ತಕೀಮ್ ಅವರನ್ನು ವಂಡರಲ್ಯಾoಡ್ ರೆಸಾರ್ಟಿನಿಂದ ಭಟ್ಕಳದ ಲೈಫ್ ಕೇರ್ ಆಸ್ಪತ್ರೆಗೆ ಕರೆತರಲಾಯಿತು.
ಮಸ್ತಕೀಮ್ ಅವರನ್ನು ಪರೀಕ್ಷಿಸಿದ ಲೈಫ್ ಕೇರ್ ಆಸ್ಪತ್ರೆ ವೈದ್ಯರು `ಆತ ಇನ್ನಿಲ್ಲ’ ಎಂಬ ಸಂಗತಿ ಬಿಚ್ಚಿಟ್ಟರು. ಜೊತೆಗಿದ್ದ ಬಾಲಕನ ತಾಯಿ ಕಣ್ಣೀರಾದರು. ಶಿಕ್ಷಕರು ಸಹ ಆಘಾತಕ್ಕೆ ಒಳಗಾದರು. ಮಗನ ಸಾವಿನ ಬಗ್ಗೆ ಮಹಮದ್ ಶಾಹಿದುಲ್ಲಾ ಅವರು ಪೊಲೀಸರಿಗೆ ವರದಿ ಒಪ್ಪಿಸಿದ್ದು, ಪೊಲೀಸರು ಕಾನೂನು ಕ್ರಮ ಜರುಗಿಸಿದರು.
`ಅಪಾಯಕಾರಿ ಸ್ಥಳಗಳ ಕಡೆ ಮಕ್ಕಳನ್ನು ಕರೆದೊಯ್ಯಬೇಡಿ. ಸುರಕ್ಷತೆಗೆ ಒತ್ತು ಕೊಡಿ’