ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಹಲವು ಕಡೆ ನವೆಂಬರ್ 12ರಂದು ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಕಾರವಾರ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ದುರಸ್ಥಿ ಕಾರಣ ಈ ದಿನ ವಿದ್ಯುತ್ ಕಡಿತ ಅನಿವಾರ್ಯವಾಗಿದೆ.
Advertisement. Scroll to continue reading.
Advertisement. Scroll to continue reading.
Advertisement. Scroll to continue reading.
ಕಾರವಾರ ಉಪವಿಭಾಗದ ವ್ಯಾಪ್ತಿಯಲ್ಲಿ ವಾಹಕ ಬದಲಾವಣೆ ಕಾಮಗಾರಿ ಹಿನ್ನಲೆ ಬೈತಕೋಲ್ ಫೀಡರಿನ ವಿವಿಧ ಪ್ರದೇಶಗಳಲ್ಲಿ ನ 12ರಂದು ಬೆಳಗ್ಗೆ 9.30ಕ್ಕೆ ವಿದ್ಯುತ್ ಸರಬರಾಜು ಸ್ಥಗಿತ ಮಾಡಲಾಗುತ್ತದೆ. ಆ ದಿನ ಸಂಜೆ 6 ಗಂಟೆಯವರೆಗೂ ವಿದ್ಯುತ್ ಪೂರೈಕೆ ಇರುವುದಿಲ್ಲ. ಹೊನ್ನಾವರ ಉಪವಿಭಾಗದ ವ್ಯಾಪ್ತಿಯಲ್ಲಿನ ಕುಮಟಾ, ಹೊನ್ನಾವರ ಮತ್ತು ಮುರ್ಡೆಶ್ವರ ಉಪಕೇಂದ್ರಲ್ಲಿ 110 ಕೆವಿ ಬಸ್‌ಬಾರ್ ನಿರ್ವಹಣಾ ಕೆಲಸವಿರುವುದರಿಂದ ನ 12ರಿಂದು ಬೆಳಗ್ಗೆ 10 ಗಂಟೆಗೆ ವಿದ್ಯುತ್ ಕಡಿತವಾಗಲಿದೆ. ಸಂಜೆ 4 ಗಂಟೆಗೆ ವಿದ್ಯುತ್ ಸಂಪರ್ಕ ಮರುಜೋಡಣೆ ಕಾರ್ಯ ನಡೆಯಲಿದೆ. ಹೀಗಾಗಿ ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಗ್ರಾಹಕರು ಸಮಸ್ಯೆ ಅನುಭವಿಸುವ ಸಾಧ್ಯತೆಗಳಿದೆ.
ಇದರೊಂದಿಗೆ ಕುಮಟಾ ಕೆಪಿಟಿಸಿಎಲ್ 110 ಕೆವಿ ಉಪಕೇಂದ್ರದಲ್ಲಿ 110 ಕೆವಿ ಬಸ್‌ಬಾರ್ ನಿರ್ವಹಣಾ ಕಾಮಗಾರಿ ಹಿನ್ನಲೆ ಕುಮಟಾದ ಮೂರುರ 11ಕೆವಿ ಮಾರ್ಗದ ಕೇಬಲ್ ಬಿಚ್ಚಿ ಮತ್ತೆ ಅಳವಡಿಸಲಾಗುತ್ತಿದೆ. ಹೀಗಾಗಿ ಕುಮಟಾ ನಗರ ಶಾಖೆಯ 11ಕೆವಿ ಇಂಡಸ್ಟಿçÃಯಲ್ ಮತ್ತು 11ಕೆವಿ ವಾಲ್ಗಳ್ಳಿ ಮಾರ್ಗದಲ್ಲಿ ಹಾಗೂ 11ಕೆವಿ ಹೊಸ ಮಾರ್ಗದ ರಚನೆಯ ಕಾಮಗಾರಿ ಹಿನ್ನಲೆ ಮಿರ್ಜಾನ್ ಮಾರ್ಗ ಮತ್ತು ಕತಗಾಲ ಮಾರ್ಗದಲ್ಲಿಯೂ ಆ ದಿನ ವಿದ್ಯುತ್ ಕಡಿತವಾಗಲಿದೆ. ಬೆಳಗ್ಗೆ 10 ಗಂಟೆಯಿAದ ಸಂಜೆ 5 ಗಂಟೆಯವರೆಗೆ ಜನ ಸಹಕಾರ ನೀಡಬೇಕು ಎಂದು ಹೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.