ಕಾಡು ಪ್ರಾಣಿ ಹಾವಳಿ ತಡೆಗೆ ಗದ್ದೆಗೆ ಅಳವಡಿಸಿದ್ದ ಅನಧಿಕೃತ ವಿದ್ಯುತ್ ಸಿದ್ದಾಪುರದ ವ್ಯಕ್ತಿಯೊಬ್ಬರನ್ನು ಕೊಂದಿದೆ. ಆಕಸ್ಮಿಕ ಅವಘಡವನ್ನು ಅರಗಿಸಿಕೊಳ್ಳಲಾಗದ ಆರೋಪತರು ಆ ಶವವನ್ನು ಹೊಳೆಗೆ ಎಸೆದು ಪರಾರಿಯಾಗಿದ್ದು, ಎರಡು ವಾರದ ನಂತರ ಸಿಕ್ಕಿ ಬಿದ್ದಿದ್ದಾರೆ.
Advertisement. Scroll to continue reading.
ಸಿದ್ದಾಪುರದ ಶೀಗೆಹಳ್ಳಿಯಲ್ಲಿ ಬಂಗಾರ್ಯ ನಾರಾಯಣ ಆಚಾರಿ (63) ಅವರು ವಾಸವಾಗಿದ್ದರು. ನವೆಂಬರ್ 3ರಂದು ಶಿಗೇಹಳ್ಳಿಯ ರಾಮಚಂದ್ರ ನಾಯ್ಕ ಅವರಿಗೆ ಕೈಗಡ ಹಣ ಕೊಡಲು ಅವರು ಮನೆಯಿಂದ ಹೊರ ಬಿದ್ದಿದ್ದರು. ಸಂಜೆ 6 ಗಂಟೆ ವೇಳೆಗೆ ದಾರಿ ನಡುವಿನ ಗದ್ದೆಯಲ್ಲಿ ಅವರು ಹಾದು ಹೋಗುತ್ತಿದ್ದು, ಅಲ್ಲಿ ಅಳವಡಿಸಲಾದ ವಿದ್ಯುತ್ ಬೇಲಿ ಸ್ಪರ್ಶದಿಂದ ಸಾವನಪ್ಪಿದರು.
ನಾಗರಾಜ ನಾರಾಯಣ ನಾಯ್ಕ, ವಸಂತ ಮಂಜಾ ನಾಯ್ಕ, ದಯಾ ಕಾಳಾ ನಾಯ್ಕ, ಮಹೇಶ ದರ್ಗಾ ನಾಯ್ಕ ಸೇರಿ ಅಲ್ಲಿನ ಗದ್ದೆಗೆ ಅಕ್ರಮವಾಗಿ ವಿದ್ಯುತ್ ಅಳವಡಿಸಿದ್ದರು. ಗದ್ದೆ ಪಕ್ಕ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಕೊಕ್ಕೆ ಹಾಕಿ ಬೇಲಿಗೆ ಸಂಪರ್ಕ ಜೋಡಿಸಿದ್ದರು. ಅದೇ ವಿದ್ಯುತ್ ಸ್ಪರ್ಶದಿಂದ ಬಂಗಾರ್ಯ ಆಚಾರಿ ಅವರು ಕೊನೆಯುಸಿರೆಳೆದಿದ್ದರು.
ಬಂಗಾರ್ಯ ಆಚಾರಿ ಅವರು ಸಾವನಪ್ಪಿದನ್ನು ನೋಡಿದ ನಾಗರಾಜ ನಾರಾಯಣ ನಾಯ್ಕ, ವಸಂತ ಮಂಜಾ ನಾಯ್ಕ, ದಯಾ ಕಾಳಾ ನಾಯ್ಕ, ಮಹೇಶ ದರ್ಗಾ ನಾಯ್ಕ ಅವರು ಇಷ್ಟು ದಿನಗಳ ಕಾಲ ಶವವನ್ನು ಅಡಗಿಸಿಟ್ಟಿದ್ದರು. 18 ದಿನದ ನಂತರ ಆ ಶವವನ್ನು ಶೀಗೆಹಳ್ಳಿ ಗ್ರಾಮದ ಮುಂಡಿಗೆಮನೆ ಬೆಟ್ಟದ ಅಡಿ ಹರಿಯುವ ಹೊಳೆಯಲ್ಲಿ ಬಿಸಾಡಿದರು. ಶವ ಕೊಳೆತ ವಾಸನೆ ಬೆನ್ನತ್ತಿ ಹೊರಟ ಜನರಿಗೆ ಅಲ್ಲಿ ಬಂಗಾರ್ಯ ಆಚಾರಿ ಅವರು ಕಾಣಿಸಿದರು.
ನವೆಂಬರ್ 4ರಂದು ಬೆಳಗ್ಗೆ 6ಗಂಟೆಗೆ ರಾಮಚಂದ್ರ ನಾಯ್ಕ ಅವರನ್ನು ಹುಡುಕಿ ಅವರ ಮಗ ವಿಷ್ಣು ಆಚಾರಿ ಅವರು ಅದೇ ಮಾರ್ಗವಾಗಿ ಹೋಗಿದ್ದು, ಆಗ ಅಲ್ಲಿನ ಗದ್ದೆ ಬಳಿ ಕರೆಂಟ್ ಲೈನಿಗೆ ಕೊಕ್ಕೆ ನೋಡಿದ್ದರು. ಜೊತೆಗೆ ಊರಿನ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯವಾಗಿದ್ದು, ಲೈಟ್ ಡಿಮ್ ಆಗಿ ಉರಿಯುತ್ತಿರುವುದನ್ನು ಗಮನಿಸಿದ್ದರು. ಬೆಳಗ್ಗೆ 10 ಗಂಟೆ ವೇಳೆಗೆ ಕರೆಂಟ್ ಲೈನಿನ ಕೊಕ್ಕೆ ತೆಗೆದಿರುವುದನ್ನು ಅವರು ಕಂಡಿದ್ದರು.
ಈ ಎಲ್ಲಾ ಹಿನ್ನಲೆ ಅಕ್ರಮ ವಿದ್ಯುತ್ ಸಂಪರ್ಕದಿAದ ಆಗುವ ಅನಾಹುತ ಅರಿವಿದ್ದರೂ ಅದನ್ನು ಅಳವಡಿಸಿ ಬಂಗಾರ್ಯ ಆಚಾರಿ ಅವರ ಸಾವಿಗೆ ಕಾರಣರಾದವರ ವಿರುದ್ಧ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಸಾಕ್ಷಿ ನಾಶಕ್ಕಾಗಿ ಶವವನ್ನು ಹೊಳೆಗೆ ಎಸೆದ ಬಗ್ಗೆಯೂ ಪೊಲೀಸರಲ್ಲಿ ವಿವರಿಸಿದರು.
`ಅಕ್ರಮ ವಿದ್ಯುತ್ ಸಂಪರ್ಕ ಜೀವಕ್ಕೆ ಅಪಾಯ’