ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಹಳಕಾರದ ಹನುಮಂತ ಮುಕ್ರಿ ಅವರ ಮನೆಗೆ ಭೇಟಿ ನೀಡಿದ್ದು, ಅವರಿಗೆ ಅಗತ್ಯವಿರುವ ಆಹಾರ ಸಾಮಗ್ರಿ ವಿತರಿಸಿದ್ದಾರೆ.
ಹನುಮಂತ ಮುಕ್ರಿ ಅವರ ಪತ್ನಿ ಹಾಗೂ ಮಗ ಅಂಗವಿಕಲರಾಗಿದ್ದು, ಅವರ ಸಮಸ್ಯೆಯನ್ನು ಕೇಂದ್ರದವರು ಆಲಿಸಿದ್ದಾರೆ. ಹನುಮಂತ ಮುಕ್ರಿ ಅವರು ಚಾಲಕರಾಗಿದ್ದು, ಅಪಘಾತದ ಅವಧಿಯಲ್ಲಿ ಬೆನ್ನಿಗೆ ಪೆಟ್ಟಾಗಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿರುವ ಬಗ್ಗೆ ವಿವರಿಸಿದ್ದಾರೆ.
`ಸರ್ಕಾರದಿಂದ ಈ ಕುಟುಂಬಕ್ಕೆ ಸಿಗುವ ಪಿಂಚಣಿ ಹೆಚ್ಚಾಗಬೇಕು. ಆ ಕುಟುಂಬದ ವಸತಿಗೆ ಯೋಗ್ಯ ಮನೆ ನಿರ್ಮಿಸಿಕೊಡಬೇಕು. ಅಂಗವಿಕಲರಿಗೆ ಅಗತ್ಯವಿರುವ ಸೌಕರ್ಯವನ್ನು ಸಹ ಈ ಕುಟುಂಬಕ್ಕೆ ಒದಗಿಸಬೇಕು’ ಎಂದು ಆಗ್ನೇಲ್ ರೋಡ್ರಿಗಸ್ ಅವರು ಆಗ್ರಹಿಸಿದ್ದಾರೆ.
ಇದರೊಂದಿಗೆ `ಸ್ವ ಉದ್ಯೋಗಕ್ಕೆ ಪ್ರೋತ್ಸಾಹ, ಅಂಗವೈಕಲ್ಯಕ್ಕೆ ಅಗತ್ಯವಿರುವ ಚಿಕಿತ್ಸೆ ಒದಗಿಸಬೇಕು’ ಎಂದು ಪ್ರಮುಖರಾದ ಸುಧಾಕರ್ ನಾಯ್ಕ್, ಹನುಮಂತ್ ಮುಕ್ರಿ, ಮಹಾಲಕ್ಷ್ಮಿ ಮುಕ್ರಿ, ಶಿವಿ ಮುಕ್ರಿ ಅವರು ಆಗ್ರಹಿಸಿದ್ದಾರೆ.