ಕತಗಾಲ ಆನೆಗುಂಡಿಯ ಸಂದೀಪ ಮುಕ್ರಿ ಅವರು ಯಾಣದ ಯುವತಿಯೊಬ್ಬರ ಖಾಸಗಿ ವಿಡಿಯೋವನ್ನು ವಿವಿಧ ಕಡೆ ಶೇರ್ ಮಾಡಿದ್ದಾರೆ. ಆ ಯುವತಿಯ ಸಂಬoಧಿ ಅರುಣ ನಾಯ್ಕ ಅವರಿಗೂ ವಿಡಿಯೋ ತಲುಪಿದ್ದು, ಅರುಣ ನಾಯ್ಕ ಅವರು ಈ ವಿಷಯವನ್ನು ಯುವತಿಗೆ ಹೇಳಿದ್ದಾರೆ.
ಕುಮಟಾದ ಯಾಣ ಬೆಳ್ಳಂಗಿಯಲ್ಲಿ ಪಿರೋಜಾ ನಾಯ್ಕ (ಹೆಸರು ಬದಲಿಸಿದೆ) ಅವರು ವಾಸವಾಗಿದ್ದಾರೆ. ಪಿರೋಜಾ ನಾಯ್ಕ ಅವರು ಕಳೆದ ಮೂರು ವರ್ಷದಿಂದ ಬೆಟ್ಕುಳಿಯ ನಾಗೇಶ ನಾಯ್ಕ (ಹೆಸರು ಬದಲಿಸಿದೆ) ಅವರನ್ನು ಪ್ರೀತಿಸುತ್ತಿದ್ದಾರೆ. ಪ್ರೀತಿ-ಪ್ರೇಮ ಎಂದು ಅವರು ಎಲ್ಲಾ ಕಡೆ ಸುತ್ತಾಟ ಮಾಡಿದ್ದಾರೆ. ಈ ವೇಳೆ ತಮ್ಮ ಖಾಸಗಿ ಕ್ಷಣಗಳನ್ನು ಅವರು ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ. ಆ ವೈಯಕ್ತಿಕ ವಿಡಿಯೋ ಇದೀಗ ಕತಗಾಲ ಆನೆಗುಂಡಿಯ ಸಂದೀಪ ಮುಕ್ರಿ ಅವರಿಗೆ ಸಿಕ್ಕಿದೆ. ಸಂದೀಪ ಮುಕ್ರಿ ಅವರು ಆ ವಿಡಿಯೋ ಡಿಲಿಟ್ ಮಾಡುವ ಬದಲು ಅದನ್ನು ಇತರರಿಗೆ ಶೇರ್ ಮಾಡಿದ್ದಾರೆ.
ಪಿರೋಜಾ ನಾಯ್ಕ ಹಾಗೂ ನಾಗೇಶ ನಾಯ್ಕ ಅವರಿಬ್ಬರೂ ವಯಸ್ಕರಾಗಿದ್ದು, ಅವರ ವಿವಾಹ ನಿಶ್ಚಯವಾಗಿದೆ. ಹೀಗಿರುವಾಗ ಅವರ ಖಾಸಗಿ ವಿಡಿಯೋ ವೈರಲ್ ಆಗಿದ್ದು ಸಮಸ್ಯೆಗೆ ಕಾರಣವಾಗಿದೆ. ಆ ವೈಯಕ್ತಿಕ ವಿಡಿಯೋ ಸಂದೀಪ ಮುಕ್ರಿ ಅವರಿಗೆ ಹೇಗೆ ಸಿಕ್ಕಿತು? ಅದನ್ನು ಅವರು ಯಾರು ಯಾರಿಗೆ ಕಳುಹಿಸಿದ್ದಾರೆ? ಎಂಬುದು ಯಾರಿಗೂ ಗೊತ್ತಿಲ್ಲ. ಅರುಣ ನಾಯ್ಕ ಅವರಿಗೆ ಸಂದೀಪ ಮುಕ್ರಿ ಅವರಿಂದ ಆ ವಿಡಿಯೋ ಬಂದ ಕಾರಣ ಖಾಸಗಿ ವಿಡಿಯೋ ಬಹಿರಂಗವಾದ ರಹಸ್ಯ ಹೊರಬಿದ್ದಿದೆ.
ಆ ವಿಡಿಯೋ ಯಾರ ಯಾರ ಮೊಬೈಲಿಗೆ ರವಾನೆ ಆಗಿದೆ? ಆ ವಿಡಿಯೋ ಸಂದೀಪ ಮುಕ್ರಿ ಅವರಿಗೆ ಸಿಕ್ಕಿದ್ದು ಹೇಗೆ? ಎನ್ನುವ ಬಗ್ಗೆ ಪಿರೋಜಾ ನಾಯ್ಕ ಅವರು ತಲೆಕೆಡಿಸಿಕೊಂಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದವರು ಆಗ್ರಹಿಸಿದ್ದಾರೆ.
`ಬೇರೆಯವರ ಖಾಸಗಿ ವಿಡಿಯೋ ಪ್ರಸಾರ ಮಾಡುವುದು ಅಪರಾಧ’