ಮೀನುಗಾರ ಮುಖಂಡರೊಬ್ಬರನ್ನು ಸುತ್ತುವರೆದ ಮೂವರು ಏಕಾಏಕಿ ಕತ್ತಿ ಬೀಸಿದ್ದಾರೆ. ಮೂವರು ಸೇರಿ ಈಶ್ವರ ತಾಂಡೇಲ್ ಅವರ ಕೊಲೆಗೆ ಪ್ರಯತ್ನಿಸಿದ್ದಾರೆ. ಕತ್ತಿ ಏಟಿನಿಂದ ಈಶ್ವರ ತಾಂಡೇಲ್ ಅವರು ತಪ್ಪಿಸಿಕೊಂಡರಾದರೂ ಅವರಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ.
Advertisement. Scroll to continue reading.
ಈಶ್ವರ ಜಾನೂ ತಾಂಡೇಲ್ ಅವರು ಕುಮಟಾದ ಗಂಗೆಕೊಳ್ಳ ಮೀನುಗಾರಿಕಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದಾರೆ. ಅರುಣ ಅಶೋಕ್ ತಾಂಡೇಲ ಅವರು ಈಶ್ವರ ತಾಂಡೇಲ್ ಅವರ ವಿರುದ್ಧ ದ್ವೇಷ ಸಾಧಿಸಿದ್ದು, ಆ ದ್ವೇಷವೇ ಕೊಲೆ ಪ್ರಯತ್ನಕ್ಕೆ ಕಾರಣವಾಗಿದೆ. ಅರುಣ ತಾಂಡೇಲ್ ಅವರ ಜೊತೆ ಮಾರುತಿ ಅಶೋಕ ತಾಂಡೇಲ್ ಹಾಗೂ ಮಾರುತಿ ತಾಂಡೇಲ್ ಅವರ ಅಕ್ಕ ಮಂಜುಳಾ ಅವರ ಪತಿ ನಾಗರಾಜ ಅವರು ಸೇರಿ ದಾಳಿ ಮಾಡಿದ್ದಾರೆ.
ಡಿಸೆಂಬರ್ 8ರ ರಾತ್ರಿ ಈಶ್ವರ ತಾಂಡೇಲ್ ಅವರ ಮೇಲೆ ಆಕ್ರಮಣ ನಡೆದಿದೆ. ರಾತ್ರಿ ವೇಳೆ ಈಶ್ವರ ತಾಂಡೇಲ್ ಅವರು ಮೀನುಗಾರಿಕಾ ಸಹಕಾರಿ ಸಂಘದ ಪೆಟ್ರೋಲ್ ಬಂಕಿಗೆ ಬಂದಿದ್ದು, ಅಲ್ಲಿ ಕಾದು ಕುಳಿತಿದ್ದ ದುಷ್ಕರ್ಮಿಗಳು ಏಕಾಏಕಿ ಜಗಳ ಶುರು ಮಾಡಿದ್ದಾರೆ. ನಂತರ ಆಯುಧಗಳಿಂದ ದಾಳಿ ಮಾಡಿದ್ದಾರೆ. ಪೆಟ್ರೋಲ್ ಬಂಕಿಗೆ ಬಂದಿದ್ದ ಡಿಸೇಲ್ ವಾಹನದಿಂದ ಇಂಧನವನ್ನು ಬಂಕಿಗೆ ಭರ್ತಿ ಮಾಡಿಸಿ, ನಂತರ ಈಶ್ವರ ತಾಂಡೇಲ್ ಅವರು ಮನೆಗೆ ಮರಳುವ ತಯಾರಿಯಲ್ಲಿದ್ದಾಗ ಗಲಾಟೆ ಶುರುವಾಗಿದೆ.
ಈಶ್ವರ ತಾಂಡೇಲ್ ಅವರ ತಲೆ, ಕೈ-ಕಾಲುಗಳಿಗೆ ಆ ಮೂವರು ಕತ್ತಿಯಿಂದ ಹೊಡೆದಿದ್ದಾರೆ. ಕಾಲಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾದ ಕಾರಣ ಈಶ್ವರ ತಾಂಡೇಲ್ ಅವರನ್ನು ಮಣಿಪಾಲದ ಆಸ್ಪತ್ರೆಗೆ ಕಳುಹಿಸಲಾಗಿದೆ. ನಾಡುಮಾಸ್ಕೇರಿ ಗ್ರಾಮದ ಗಂಗೆಕೊಳ್ಳದಲ್ಲಿರುವ ಭೂಮಿಯೊಂದರ ವಿಷಯವಾಗಿ ಈಶ್ವರ ತಾಂಡೇಲ್ ಹಾಗೂ ಅರುಣ ತಾಂಡೇಲ್ ಅವರ ನಡುವೆ ವೈಮನಸ್ಸು ಹುಟ್ಟಿದ್ದು, ಜಾಗದ ವಿಷಯವಾಗಿ ನಡೆಯುತ್ತಿದ್ದ ತಕರಾರು ಈ ಗಲಾಟೆಗೆ ಕಾರಣವಾಗಿದೆ.