ಸಿಲೆಂಡರ್ ಸ್ಪೋಟದ ತೀವೃತೆಗೆ ಮೂರು ವಾಹನಗಳು ಸುಟ್ಟು ಕರಕಲಾಗಿದೆ. ಎರಡು ಕಾರಿನ ಜೊತೆ ಆಟೋವೊಂದು ಭಸ್ಮವಾಗಿದೆ.
ಕಾರವಾರದ ಅಮದಳ್ಳಿಯಲ್ಲಿ ಮಂಗಳವಾರ ನಸುಕಿನಲ್ಲಿ ಈ ದುರಂತ ನಡೆದಿದೆ. ಆಟೋದಲ್ಲಿದ್ದ ಸಿಲೆಂಡರ್ ಸ್ಪೋಟದ ತೀವೃತೆಗೆ ಪಕ್ಕದಲ್ಲಿದ್ದ ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿದೆ. ಸುಪ್ರೀನ್ ಫರ್ನಾಂಡಿಸ್ ಹಾಗೂ ಥಾಮಸ್ ಫರ್ನಾಂಡಿಸ್ ಎಂಬಾತರಿಗೆ ಸೇರಿದ ವಾಹನಗಳು ಇದಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಆಗಮಿಸುವುದರೊಳಗೆ ಕಾರು ಕರಕಲಾಗಿದೆ.
ದಿಢೀರ್ ಆಗಿ ಬೆಂಕಿ ತಗುಲಿದ್ದರಿಂದ ಅಲ್ಲಿದ್ದವರಿಗೆ ಏನು ಮಾಡಬೇಕು? ಎಂದೇ ಗೊತ್ತಾಗಿಲ್ಲ. ಬೆಂಕಿ ಆರಿಸುವ ಪ್ರಯತ್ನ ನಡೆದರೂ ಅದು ಫಲ ಕೊಡಲಿಲ್ಲ. ಈ ವೇಳೆ ವ್ಯಕ್ತಿಯೊಬ್ಬರು ಪೊಲೀಸರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದ್ದು, ಅವರು ಬರುವುದರೊಳಗೆ ಮೂರು ವಾಹನಗಳು ನಾಶವಾಗಿದ್ದವು. ಅದಾಗಿಯೂ, ಅಗ್ನಿ ಅವಘಡ ವಿಸ್ತರಿಸದ ಹಾಗೇ ಅಗ್ನಿಶಾಮಕ ಸಿಬ್ಬಂದಿ ತಡೆದರು.
ಮೂರು ವಾಹನ ಸಂಪೂರ್ಣವಾಗಿ ಸುಟ್ಟಿದ್ದರಿಂದ ಕಬ್ಬಿಣದ ತುಂಡುಗಳು ಮಾತ್ರ ಸ್ಥಳದಲ್ಲಿವೆ. ಬೆಂಕಿ ಜ್ವಾಲೆ ನೋಡಿದ ಜನ ಆತಂಕಕ್ಕೆ ಒಳಗಾಗಿದ್ದು, ತುರ್ತು ಕಾರ್ಯಾಚರಣೆಯಿಂದ ಅಲ್ಲಿದ್ದ ಮನೆಗಳಿಗೆ ಬೆಂಕಿ ತಗಲುವುದು ತಪ್ಪಿದೆ. ರಿಕ್ಷಾದ ಒಳಗಿದ್ದ ಸಿಲೆಂಡರ್ ಸೋರಿಕೆ ಅನಾಹುತಕ್ಕೆ ಕಾರಣ ಎನ್ನುವ ಬಗ್ಗೆ ಅಂದಾಜಿಸಲಾಗಿದ್ದು, ತನಿಖೆ ಮುಂದುವರೆದಿದೆ.