ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳಲ್ಲಿನ ವಿವಿಧ ಅಂಗನವಾಡಿಗಳಲ್ಲಿ ವಿವಿಧ ಹುದ್ದೆಗಳು ಖಾಲಿಯಿದ್ದು, ಯೋಗ್ಯರ ಹುಡುಕಾಟ ನಡೆದಿದೆ.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಾಗಿ ಸದ್ಯ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕಾರವಾರದಲ್ಲಿ 8 ಸಹಾಯಕಿ ಹುದ್ದೆಗಳು ಖಾಲಿಯಿವೆ. ಅಂಕೋಲಾ ಎರಡು ಕಾರ್ಯಕರ್ತೆ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಜೊತೆಗೆ ಅಂಕೋಲಾದಲ್ಲಿ 24 ಸಹಾಯಕಿಯರು ಅಗತ್ಯವಿದೆ. ಕುಮಟಾದದಲ್ಲಿ 9 ಕಡೆ ಅಂಗನವಾಡಿ ಸಹಾಯಕಿಯರ ಹುದ್ದೆ ಕಾಲಿಯಿದ್ದು ಹುಡುಕಾಟ ನಡೆದಿದೆ. ಹೊನ್ನಾವರದ ಒಂದು ಅಂಗನವಾಡಿಯಲ್ಲಿ ಕಾರ್ಯಕರ್ತೆ ಹುದ್ದೆ ಖಾಲಿಯಿದೆ. ಜೊತೆಗೆ ಹೊನ್ನಾವರದಲ್ಲಿ 12 ಅಂಗನವಾಡಿಗಳಿಗೆ ಸಹಾಯಕಿಯರು ಬೇಕಾಗಿದ್ದಾರೆ. ಭಟ್ಕಳದಲ್ಲಿ ಒಂದು ಅಂಗನವಾಡಿ ಕಾರ್ಯಕರ್ತೆ ಹಾಗೂ 16 ಸಹಾಯಕಿಯರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಶಿರಸಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಎರಡು ಹುದ್ದೆ ಖಾಲಿಯಿದ್ದು, ಇಲ್ಲಿ 39 ಸಹಾಯಕಿಯರ ಹುದ್ದೆಗಳಿವೆ. ಸಿದ್ದಾಪುರದಲ್ಲಿ 4 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 15 ಸಹಾಯಕಿಯರಿಗಾಗಿ ಅರ್ಜಿ ಕರೆಯಲಾಗಿದೆ. ಯಲ್ಲಾಪುರ ಮೂರು ಅಂಗನವಾಡಿ ಕಾರ್ಯಕರ್ತೆಯರ ಜೊತೆ 25 ಸಹಾಯಕಿ ಹುದ್ದೆಗಳಿಗಾಗಿ ಯೋಗ್ಯರ ಹುಡುಕಾಟ ನಡೆದಿದೆ. ಮುಂಡಗೋಡದಲ್ಲಿ ಎರಡು ಕಾರ್ಯಕರ್ತೆ ಹಾಗೂ 16 ಸಹಾಯಕಿ ಹುದ್ದೆಗಳಿವೆ. ಹಳಿಯಾಳ ಮೂರು ಕಾರ್ಯಕರ್ತೆ ಹಾಗೂ 18 ಸಹಾಯಕಿ ಹುದ್ದೆಗಳಿವೆ. ದಾಂಡೇಲಿಯಲ್ಲಿ 8 ಸಹಾಯಕಿ ಹುದ್ದೆಗಳು ಖಾಲಿಯಿವೆ.
ಜೋಯಿಡಾದಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ 5 ಹಾಗೂ ಸಹಾಯಕಿ ಹುದ್ದೆಗೆ 16 ಉದ್ಯೋಗ ಅವಕಾಶಗಳಿವೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 23 ಅಂಗನವಾಡಿ ಕಾರ್ಯಕರ್ತೆರು ಮತ್ತು 206 ಸಹಾಯಕಿಯರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹರು ಇನ್ನಷ್ಟು ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಭೇಟಿ ಮಾಡಬಹುದು. ಜೊತೆಗೆ ಡಿಸೆಂಬರ್ 31ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಇಲ್ಲಿ ಕ್ಲಿಕ್ಕಿಸಿ: ಅಂಗನವಾಡಿ ಹುದ್ದೆಗೆ ಅರ್ಜಿ