ಯಲ್ಲಾಪುರ-ಮುಂಡಗೋಡು ರಸ್ತೆಗೆ ಹೊಂದಿಕೊoಡು ಅರಣ್ಯ ಇಲಾಖೆಯವರು `ದೇವರ ಕಾಡು’ ನಿರ್ಮಿಸಿದ್ದು, ದೇವಿ ಆಲಯವನ್ನು ಹೊಂದಿರುವ ಈ ಅರಣ್ಯ ಗಬ್ಬೆದ್ದಿದೆ. ಹೀಗಾಗಿ ಆ ಪ್ರದೇಶವನ್ನು ಸ್ವಚ್ಛ ಹಾಗೂ ಸುಂದರವನ್ನಾಗಿಸುವoತೆ ಸಮಾನ ಮನಸ್ಕರು ಮನವಿ ಸಲ್ಲಿಸಿದ್ದಾರೆ.
Advertisement. Scroll to continue reading.
ಯಲ್ಲಾಪುರದಿಂದ 3ಕಿಮೀ ದೂರದಲ್ಲಿ ದೇವರ ಕಾಡು ಪ್ರದೇಶವಿದೆ. ಅಲ್ಲಿ ಪುರಾತನ ಕಾಲದಿಂದಲೂ ಸಾತೇರಿ ದೇವಿಯ ಗುಡಿಯಿದೆ. ಅನೇಕ ಭಕ್ತರು ದೇವಿಗೆ ನಡೆದುಕೊಳ್ಳುತ್ತಾರೆ. ಎರಡು ವರ್ಷದ ಹಿಂದೆ ಅರಣ್ಯ ಇಲಾಖೆಯವರು ಇಲ್ಲಿ ಉದ್ಯಾನವನ ನಿರ್ಮಿಸಿದ್ದಾರೆ. ಗುಹೆ ಆಕಾರದ ಪ್ರವೇಶ ದ್ವಾರ ಜನರ ಗಮನಸೆಳೆಯುತ್ತಿದೆ. ಆದರೆ, ಇಲ್ಲಿ ಪ್ರವೇಶಿಸುವ ಪ್ರವಾಸಿಗರು ಎಲ್ಲೆಂದರಲ್ಲಿ ಮದ್ಯದ ಬಾಟಲಿ ಎಸೆಯುತ್ತಿದ್ದಾರೆ. ಕಂಡ ಕಂಡಲ್ಲಿ ಗುಟ್ಕಾ ಉಗಿದು ಗಲೀಜು ಮಾಡಿದ್ದಾರೆ. ಇದರಿಂದ ದೇವರ ಕಾಡಿನ ಜೊತೆ ಅಲ್ಲಿ ನೆಲೆಸಿರುವ ದೇವಿಗೂ ಅಪಚಾರವಾಗುತ್ತಿದೆ.
ಇದನ್ನು ಸಹಿಸದ ರವೀಂದ್ರ ನಗರದ ಸೋಮೇಶ್ವರ ನಾಯ್ಕ ಅವರು ತಮ್ಮ ಸ್ನೇಹಿತರ ಜೊತೆ ಸೇರಿ ಸ್ವಚ್ಚತೆ ಕಾಪಾಡುವಂತೆ ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದ್ದಾರೆ. `ದೇವರ ಕಾಡಿನಲ್ಲಿ ನಿರ್ಮಿಸಿದ ಆಸನಗಳನ್ನು ಸರಿಯಾಗಿರಿಸಬೇಕು. ಅಲ್ಲಿನ ಮಾಲಿನ್ಯವನ್ನು ಸರಿಪಡಿಸಿ ಪ್ರವಾಸಿಗರಿಗೆ ಮುಜುಗರವಾಗುವುದನ್ನು ತಪ್ಪಿಸಬೇಕು’ ಎಂದು ಸುಜಯ ಮರಾಠಿ, ಸಾಜು ಜೋರೇ, ತೇಜೇಶ್ ಭೋವಿ ಹಾಗೂ ಮನು ಪೊಳ್ ಅವರು ಮನವಿ ಮಾಡಿದ್ದಾರೆ.
ಈ ಬಗ್ಗೆ ಉಪಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಅವರಿಗೂ ಮಂಗಳವಾರ ಮನವಿ ಸಲ್ಲಿಸಿದ್ದು, ಫೆಬ್ರವರಿಯಲ್ಲಿ ನಡೆಯುವ ಯಲ್ಲಾಪುರ ಜಾತ್ರೆಯ ಬಗ್ಗೆಯೂ ಉಲ್ಲೇಖಿಸಿದ್ದಾರೆ. `ಯಲ್ಲಾಪುರ ಜಾತ್ರೆಯ ಮುನ್ನ ಸಂಪ್ರದಾಯದAತೆ ಹೊರ ಮಂಗಳವಾರ ಆಚರಣೆ ನಡೆಯುತ್ತದೆ. ಆ ಅವಧಿಯಲ್ಲಿ ಯಲ್ಲಾಪುರ ಪಟ್ಟಣದ ಜನ ನಗರ ಬಿಟ್ಟು ಹೊರ ಪ್ರದೇಶಕ್ಕೆ ಬರಲಿದ್ದು, ಅನೇಕರು ದೇವರ ಕಾಡಿಗೆ ಬಂದು ಕಾಲ ಕಳೆಯುತ್ತಾರೆ. ಅವರಿಗೆ ಅನುಕೂಲವಾಗುವ ರೀತಿ ಇಲ್ಲಿ ವಾತಾವರಣ ನಿರ್ಮಿಸಬೇಕು. ತ್ಯಾಜ್ಯಗಳನ್ನು ತೆಗೆದು ಸ್ವಚ್ಛತೆ ಕಾಪಾಡಿದರೆ ಎಲ್ಲರಿಗೂ ಅನುಕೂಲ’ ಎಂದು ಆನಂದ್ ಭೋವಿ, ರಿಜ್ವಾನ್ ಶೈಖ್, ಷಣ್ಮುಖ ನಾಯ್ಕ, ನಂದನ್ ಮರಾಠಿ, ಮೋಹನ್ ಪಾಲೇಕಾರ್, ರೋಹಿತ್ ಸಾಲುಂಕೆ, ಗಿರೀಶ್ ಭೋವಿವಡ್ಡರ್, ಕುಮಾರ್ ವಾಲ್ಮೀಕಿ ಹಾಗೂ ರಾಜು ನಾಯ್ಕ ಅವರು ಹೇಳಿದ್ದಾರೆ.