ಪದೇ ಪದೇ ಅಪಘಾತವಾಗುತ್ತಿರುವ ಹೊನ್ನಾವರದ ಸೂಳೆಮುರ್ಕಿ ತಿರುವಿನಲ್ಲಿ ಕಳೆದ ರಾತ್ರಿಯೂ ಕಾರೊಂದು ಬೆಂಕಿಗೆ ಆಹುತಿಯಾಗಿದೆ. ಕಾರಿನಲ್ಲಿದ್ದ ಇಬ್ಬರು ಗುರುತು ಸಿಗದಷ್ಟರ ಮಟ್ಟಿಗೆ ಸುಟ್ಟು ಕರಕಲಾಗಿದ್ದಾರೆ.
Advertisement. Scroll to continue reading.
ಈವರೆಗೆ ಬಂದ ಮಾಹಿತಿ ಪ್ರಕಾರ ಸಿದ್ದಾಪುರ ವ್ಯಕ್ತಿಗಳಿಬ್ಬರು ಇಲ್ಲಿ ಸುಟ್ಟು ಬೂದಿಯಾಗಿದ್ದಾರೆ. ದುರಂತದಲ್ಲಿ ಕಾರಿನ ಜೊತೆ ನಂಬರ್ ಪ್ಲೇಟ್ ಸಹ ಕರಗಿದ್ದರಿಂದ ಖಚಿತ ಮಾಹಿತಿ ಸಿಗುತ್ತಿಲ್ಲ. ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ದುರಂತ ನಡೆದಿರುವ ಬಗ್ಗೆ ಶಂಕಿಸಲಾಗಿದೆ.
Advertisement. Scroll to continue reading.
ಈ ಭೀಕರ ಕಾರು ಅಪಘಾತದಿಂದ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಕ್ಷಣ ಮಾತ್ರದಲ್ಲಿ ಕಾರು ಸುಟ್ಟಿದೆ. ಬೆಂಕಿಯಲ್ಲಿ ಉರಿದ ಕಾರು ಕಂದಕಕ್ಕೆ ಬಿದ್ದಿದ್ದು, ಕಾರಿನ ಒಳಗಿದ್ದವರು ಹೊರಗೆ ಬರಲಾಗದೇ ಅಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಪೊಲೀಸರು ಸ್ಥಳದಲ್ಲಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯೂ ಅಲ್ಲಿಯೇ ಇದ್ದಾರೆ. ಮಂಗಳವಾರ ರಾತ್ರಿ ದುರಂತ ನಡೆದಿದ್ದು, ಬುಧವಾರ ಗೊತ್ತಾಗಿದೆ.
Advertisement. Scroll to continue reading.
ಸದ್ಯ ಸಾವನಪ್ಪಿದವರ ಪತ್ತೆ ಕಾರ್ಯ ನಡೆದಿದ್ದು, ಕೆಲ ಅನುಮಾನಗಳ ಮೇಲೆ ಅವರ ಸಂಬoಧಿಕರ ವಿಚಾರಣೆ ನಡೆದಿದೆ.