ಕಲಘಟಗಿಯಿಂದ ಹಳಿಯಾಳಕ್ಕೆ ಬರುತ್ತಿದ್ದ ಬಸ್ಸು ಅಪಘಾತಕ್ಕೀಡಾಗಿದ್ದು, 12ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯವಾಗಿದೆ. 20ಕ್ಕೂ ಅಧಿಕ ಪ್ರಯಾಣಿಕರಿಗೆ ಈ ಅವಘಡದಲ್ಲಿ ಪೆಟ್ಟಾಗಿದೆ.
ಹಳಿಯಾಳ ತಾಲೂಕಿನ ಬಾಣಸಗೇರಿ ಗ್ರಾಮದ ಬಳಿ ಈ ಅವಘಡ ನಡೆದಿದೆ. ಮುಂದಿನಿAದ ಬಂದ ಕಾರಿಗೆ ಬಸ್ಸು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್ಸಿನ ಚಾಲಕ ಸ್ಟೇರಿಂಗ್ ತಿರುಗಿಸಿದ್ದು, ಆ ಬಸ್ಸು ಮರಕ್ಕೆ ಗುದ್ದಿದೆ. ಬಸ್ಸಿನ ಚಾಲಕನಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ಜೊತೆಗೆ ಇಬ್ಬರು ಮಕ್ಕಳಿಗೂ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ವೈದ್ಯರು ಆರೈಕೆ ಮಾಡುತ್ತಿದ್ದಾರೆ.
Advertisement. Scroll to continue reading.
Advertisement. Scroll to continue reading.
Advertisement. Scroll to continue reading.
ಈ ಬಸ್ಸಿನಲ್ಲಿ 40ಕ್ಕೂ ಅಧಿಕ ಪ್ರಯಾಣಿಕರಿದ್ದರು. ಆ ಪೈಕಿ 8 ವಿದ್ಯಾರ್ಥಿನಿಯರು, ಇಬ್ಬರು ಮಹಿಳೆಯರು ಹಾಗೂ ಇಬ್ಬರು ಶಾಲಾ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ನೋವು ಅನುಭವಿಸಿದರು. ಬಸ್ಸಿನ ಮುಂದಿನ ಭಾಗ ಸಂಪೂರ್ಣವಾಗಿ ಜಖಂ ಆಗಿದ್ದು, ಮುಂದಿನ ಆಸನದಲ್ಲಿದ್ದ ವಿದ್ಯಾರ್ಥಿಯ ಕಾಲು ಅಲ್ಲಿಯೇ ಸಿಲುಕಿ ಬಿದ್ದಿತ್ತು. ಒಂದು ತಾಸಿನ ಕಾರ್ಯಾಚರಣೆ ನಂತರ ಆ ವಿದ್ಯಾರ್ಥಿಯನ್ನು ಅಲ್ಲಿಂದ ಹೊರ ತೆಗೆಯಲಾಯಿತು.
ಹಳಿಯಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಸುಗಳ ಕಾಲ ಸಂಚಾರ ದಟ್ಟಣೆ ಕಾಣಿಸಿತು. ನಂತರ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.