ಕುಮಟಾದ ಎ ವಿ ಬಾಳಿಗಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿದ್ದ ಓಮಿನಿ ಅಪಘಾತಕ್ಕೀಡಾಗಿದೆ. ನಾಲ್ವರು ಮಕ್ಕಳ ಜೊತೆ ಓಮಿನಿ ಓಡಿಸುತ್ತಿದ್ದವರು ಗಾಯಗೊಂಡಿದ್ದಾರೆ.
ಶನಿವಾರ ಶಾಲೆ ಮುಗಿಸಿ ಬಂದ ಮಕ್ಕಳನ್ನು ಓಮಿನಿ ಅವರವರ ಮನೆಗೆ ಕರೆದೊಯ್ಯುತ್ತಿತ್ತು. ಹಳೆ ಬಸ್ ನಿಲ್ದಾಣದ ಬಳಿ ಓಮಿನಿ ಚಾಲಕನ ನಿಯಂತ್ರಣ ತಪ್ಪಿದ್ದು ಬುಲೆರೋಗೆ ಡಿಕ್ಕಿ ಹೊಡೆಯಿತು. ತನಿಷ್ಕ (15), ಅದ್ವಿತ್ (12), ಅರ್ಜುನ್ (13), ಆಯಿರಾ (10) ಎಂಬ ವಿದ್ಯಾರ್ಥಿಗಳು ಅಪಘಾತದಲ್ಲಿ ಗಾಯಗೊಂಡರು. ಓಮಿನಿ ವಾಹನದ ಚಾಲಕ ಜಟ್ಟಿ ಮುಕ್ರಿ ಅವರು ಸಹ ಪೆಟ್ಟು ಮಾಡಿಕೊಂಡರು. ಸದ್ಯ ಎಲ್ಲ ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆದೊಯ್ಯುವ ವೇಳೆ ಓಮಿನಿ ಚಾಲಕನಿಗೆ ತಲೆ ಸುತ್ತು ಬಂದ ಕಾರಣ ವಾಹನದ ನಿಯಂತ್ರಣ ತಪ್ಪಿದೆ. ಓಮಿನಿ ವಾಹನದ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿದೆ. ಸ್ಥಳೀಯರು ಸಾಕಷ್ಟು ಪ್ರಮಾಣದಲ್ಲಿ ಸಹಕಾರ ನೀಡಿದ್ದು, ಗಾಯಾಳುಗಳ ಆರೈಕೆ ಮಾಡಿದ್ದಾರೆ.