ಕಾರವಾರದ ಡೆಸರ್ಟಿನೊ ಆಹಾರ ಮಳಿಗೆಯಲ್ಲಿ ಮಂಗಳವಾರ ಗ್ರಾಹಕರು ತುಂಬಿದ್ದು, ಈ ಅವಧಿಯಲ್ಲಿಯೇ ಮಳಿಗೆಗೆ ಬೆಂಕಿ ಬಿದ್ದಿದೆ. ಬೆಂಕಿ ನೋಡಿದ ಜನ ಕೆಫೆಯಿಂದ ಹೊರಗೆ ಓಡಿ ಬಂದು ಅಪಾಯದಿಂದ ಪಾರಾಗಿದ್ದಾರೆ.
ಕಾರವಾರದ ಗ್ರೀನ್ ಸ್ಟಿಟ್ ರಸ್ತೆಯಲ್ಲಿ ಡೆಸರ್ಟಿನೊ ಆಹಾರ ಮಳಿಗೆಯಿದೆ. ಈ ಮಳಿಗೆಯಲ್ಲಿ ತಿನಿಸು ಖರೀದಿಸಲು ಗ್ರಾಹಕರು ಬರುತ್ತಿದ್ದು, ಗ್ರಾಹಕರಿರುವಾಗಲೇ ವಿದ್ಯುತ್ ಶಾರ್ಟ ಸರ್ಕೀಟ್ ಸಂಭವಿಸಿದೆ. ಪರಿಣಾಮ ಮಳಿಗೆ ಒಳಭಾಗ ದಟ್ಟ ಹೊಗೆ ಕಾಣಿಸಿದೆ. ಇದರಿಂದ ಅಲ್ಲಿನ ಸಿಬ್ಬಂದಿ ಹಾಗೂ ಗ್ರಾಹಕರು ಆತಂಕಕ್ಕೆ ಒಳಗಾಗಿ ಹೊರಗೆ ಒಡಿದ್ದಾರೆ.
ಅನಿರೀಕ್ಷಿತವಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದ ಹಾಗೇ ಜನ ಆತಂಕಕ್ಕೆ ಒಳಗಾಗಿದ್ದು, ಮಾಹಿತಿಪಡೆದು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದರು. ಅವರು ಬೆಂಕಿ ಆರಿಸುವ ಮೂಲಕ ದೊಡ್ಡ ಅನಾಹುತ ತಪ್ಪಿಸಿದರು. ಬೆಂಕಿ ಪಕ್ಕದ ಕಟ್ಟಡಕ್ಕೂ ಹಬ್ಬುವ ಆತಂಕವಿದ್ದು, ಅದನ್ನು ಅಗ್ನಿಶಾಮಕ ಸಿಬ್ಬಂದಿ ದೂರ ಮಾಡಿದರು. ಮಳಿಗೆಗೆ ಬೆಂಕಿ ಬಿದ್ದ ಪರಿಣಾಮ ವಿವಿಧ ಪೀಠೋಪಕರಣಗಳು ಸುಟ್ಟು ಕರಕಲಾಗಿದೆ.