‘ಸಿದ್ದಾಪುರದ ಕಾನಸೂರಿನಲ್ಲಿ ಬಿಜೆಪಿಗರು ಪ್ರತಿಭಟನೆ ಮಾಡಿದ್ದು, `ನಮ್ಮ ಮನೆ-ನಮ್ಮ ಹಕ್ಕು’ ಎಂದು ಘೋಷಣೆ ಕೂಗಿದ್ದಾರೆ. `ಬಡವರ ಮನೆ ಕೆಡಗುವ ಪ್ರಯತ್ನ ಮಾಡಿದರೆ ಸುಮ್ಮನಿರುವುದಿಲ್ಲ’ ಎಂದು ಆಕ್ರೋಶದ ಮಾತುಗಳನ್ನಾಡಿದ್ದಾರೆ.
ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಪ್ರತಿಭಟನೆಯಲ್ಲಿ ಮಾತನಾಡಿ `ಭ್ರಷ್ಟ ಕಾಂಗ್ರೆಸ್ ಸರ್ಕಾರ ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ’ ಎಂದು ದೂರಿದ್ದಾರೆ. `ಬ್ರಿಟಿಷರಿಗಿಂತಲೂ ಕ್ರೂರತ್ವ ಕಾಂಗ್ರೆಸ್ಸಿಗರಲ್ಲಿದೆ. ಕಾಂಗ್ರೆಸ್ ಸರ್ಕಾರದ ಅನ್ಯಾಯ ಸಹಿಸಲು ಸಾಧ್ಯವಿಲ್ಲ’ ಎಂದು ಗುಡುಗಿದ್ದಾರೆ. `ಉತ್ತರ ಕನ್ನಡ ಜಿಲ್ಲೆಗೆ ಸಾಕಷ್ಟು ಅನ್ಯಾಯವಾಗಿದೆ. ಸದ್ಯ ಬಡವರ ಮನೆಯ ಹಕ್ಕು ಕಸಿಯುವ ಹುನ್ನಾರ ನಡೆದಿದೆ’ ಎಂದವರು ದೂರಿದ್ದಾರೆ.
`ಮಳೆ ಕೊರತೆಯಿಂದ ಸಿದ್ದಾಪುರ ತಾಲೂಕಿನ ಹಲವು ಕಡೆ ಭತ್ತದ ಗದ್ದೆಗಳು ಒಣಗಿದೆ. ಆದರೆ ಸರಕಾರ ಇದುವರೆಗೂ ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಿಲ್ಲ. ಶಾಸಕರು ಸಹ ನಿದ್ದೆಯಲ್ಲಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖರಾದ ಬಲರಾಮ ನಾಮಧಾರಿ, ಕೃಷ್ಣಮೂರ್ತಿ ಹೆಗಡೆ, ವಿನಾಯಕ ಹೆಗಡೆ, ಏನ್ ವಿ ಹೆಗಡೆ ,ಜಿ ಜಿ ದೇವಿಸರ ,ನಾಗರಾಜ ಕರಮನೆ, ಗಣೇಶ ಕಾನಸೂರು , ಮನೋಜ ಕಾನಸೂರು, ಏನ್ ವಿ ಹೆಗಡೆ ಮಾದನಕಲ್ ಇದ್ದರು.