ಮೂರು ಬಿಯರ್ ಖಾಲಿ ಮಾಡಿದಲ್ಲದೇ ಮತ್ತೊಂದು ಬಿಯರ್ ಹಿಡಿದು ತೂರಾಡುತ್ತಿದ್ದ ವ್ಯಕ್ತಿ ವಿರುದ್ಧ ಗೋಕರ್ಣ ಪೊಲೀಸರು ಕೇಸು ಹಾಕಿದ್ದಾರೆ!
ಮಹಾರಾಷ್ಟದ ಶೋನ್ ಕುಹಾರ್ಡೆ ಅವರು ವಿಪರೀತ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ಜೊತೆಗೆ ಕುಡಿದ ನಶೆಯಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಮಾಡಿದ್ದಾರೆ. ಓಂ ಬೀಚ್ ರಸ್ತೆಯ ಬಂಗ್ಲೆಗುಡ್ಡದ ಬಳಿ ವಾಸವಾಗಿರುವ ಅವರು ಜನವರಿ 1ರಂದು ಜಂಗಲ್ ಬಾಯ್ ಸುಪ್ರೀಂ ಹಾಸ್ಟೇಲ್ ಬಳಿ ತೂರಾಡುತ್ತಿರುವುದನ್ನು ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗೋಕರ್ಣ ಪಿಸೈ ಶಶಿಧರ ಕೆ ಎಚ್ ಅವರು ಬಂಗ್ಲೆಗುಡ್ಡದ ಬಳಿ ತೆರಳಿದ್ದು, ಆಗ ಶೋನ್ ಕುಹಾರ್ಡೆ ಅವರು ಅಲ್ಲಿ ಗಲಾಟೆ ಮಾಡುತ್ತಿರುವುದನ್ನು ನೋಡಿದ್ದಾರೆ. 650ಮಿಲಿಯ ಮೂರು ಬಿಯರ್ ಬಾಟಲಿ ಖಾಲಿ ಮಾಡಿದ್ದ ಶೋನ್ ಕುರ್ಹಾಡೆ ಮತ್ತೊಂದು ಬಿಯರ್ ಬಾಟಲಿ ಹಿಡಿದು ರಂಪಾಟ ನಡೆಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಕುಡಿದು ಗಲಾಟೆ ಮಾಡಿದ ಕಾರಣ ಪೊಲೀಸರು ಶೋನ್ ಕುಹಾರ್ಡೆ ವಿರುದ್ಧ ಪ್ರಕರಣ ದಾಖಲಿಸಿದ್ದು, ಆ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಒಪ್ಪಿಸಿದ್ದಾರೆ.