ಜೊಯಿಡಾದ ಶಿಗ್ಗರಗಾಂವ್ ಗ್ರಾಮ ಪಂಚಾಯತ ಅಧ್ಯಕ್ಷ ಶ್ಯಾಮ್ ಮಂಡೋಸ್ ಅವರು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ. ಅವರ ಮರಳು ಲಾರಿಯನ್ನು ಅರಣ್ಯಾಧಿಕಾರಿಗಳು ತಡೆದಿದ್ದಾರೆ. ಜೊತೆಗೆ ಶ್ಯಾಮ್ ಮಂಡೋಸ್ ಅವರನ್ನು ಬಂಧಿಸಿದ್ದಾರೆ.
ಜೊಯಿಡಾದ ಅಮಸೇತ್ ಗ್ರಾಮದ ಶ್ಯಾಮ್ ಜೋನ್ ಮಂಡೋಸ್ ಅವರು ಜೊಯಿಡಾದ ಶಿಗ್ಗರಗಾಂವ್ ಗ್ರಾಮ ಪಂಚಾಯತ ಅಧ್ಯಕ್ಷರಾಗಿದ್ದಾರೆ. ಅವರು ತಮ್ಮ ಲಾರಿ ಮೂಲಕ ಅಕ್ರಮ ನಡೆಸಿದ್ದು, ಮರಳುಗಾರಿಕೆ ನಡೆಸುವಾಗ ಸಿಕ್ಕಿ ಬಿದ್ದಿದ್ದಾರೆ. ಜೊಯಿಡಾದ ಬರ್ಚಿಯಲ್ಲಿ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಮಾಡಿದ್ದಾರೆ. ದಾಂಡೇಲಿ ಮಾರ್ಗವಾಗಿ ಮರಳು ಸಾಗಾಟವಾಗುತ್ತಿರುವುದನ್ನು ತಡೆದಿದ್ದಾರೆ.
ಅಮಸೇತ್ ಗ್ರಾಮದಿಂದ ದಾಂಡೇಲಿ ಕಡೆ ಮರಳು ಸಾಗಾಟ ಮಾಡುವಾಗಲೇ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಲಾರಿಯನ್ನು ವಶಕ್ಕೆಪಡೆದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ನಿಸರ್ಗಕ್ಕೆ ಹಾನಿ ಆಗುವ ರೀತಿ ಮರಳು ತೆಗೆದು ಸಾಗಾಟ ಮಾಡಿದ ಕಾರಣ ಜೋನ್ ಮಂಡೋಸ್ ವಿರುದ್ಧ ಕ್ರಮ ಜರುಗಿಸಿದ್ದಾರೆ. ಜಾನ್ ಮಂಡೋಸ್ ಅವರನ್ನು ಅರಣ್ಯಾಧಿಕಾರಿಗಳು ದಾಂಡೇಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.