ಅಂಕೋಲಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಹಿರೇಗುತ್ತಿಯಲ್ಲಿ ಪೊಲೀಸ್ ಮನೆಗೆ ನುಗ್ಗಿದ ಕಳ್ಳರು ಹಣ-ಒಡವೆ ದೋಚಿದ್ದು, ಅದಾದ ನಂತರ ಸುಂಕಸಾಳದ ಬ್ಯಾಂಕ್ ದರೋಡೆಗೆ ಯತ್ನಿಸಿದ್ದರು. ಅದರ ಬೆನ್ನಲ್ಲೆ ಮತ್ತೆ ಮೂರು ಕಡೆ ಕಳ್ಳರು ಕೈ ಚಳಕ ಪ್ರದರ್ಶಿಸಿದ್ದಾರೆ.
Advertisement. Scroll to continue reading.
ಅಂಕೋಲಾದ ಅಗಸೂರಿನ ಬಳಿ ಒಂದೇ ರಾತ್ರಿ ಮೂರು ಕಡೆ ಕಳ್ಳರು ಮನೆಯ ಬೀಗ ಒಡೆದಿದ್ದಾರೆ. ಸರಳೆಬೈಲಿನ ಎರಡು ಮನೆ ಜೊತೆ ಅಗಸೂರು ಮುಖ್ಯ ರಸ್ತೆಯಲ್ಲಿ ಒಂದು ಮನೆಗೆ ಕಳ್ಳರು ನುಗ್ಗಿದ್ದಾರೆ. ಸರಳೆಬೈಲಿನ ನಿವೃತ್ತ ನೌಕರರ ಮನೆಯಲ್ಲಿ ಕಳ್ಳರಿಗೆ ಬೆಲೆಬಾಳುವ ಲಾಪ್‌ಟಾಪ್ ಸಿಕ್ಕಿದೆ. ಇನ್ನೆರಡು ಮನೆಯಲ್ಲಿ ಏನೂ ಸಿಗದ ಕಾರಣ ಹಾಗೇ ಮರಳಿದ್ದಾರೆ.
ಜನರಿಲ್ಲದ ಮನೆ ಗುರುತಿಸುವ ಕಳ್ಳರು ಹಗಲು – ರಾತ್ರಿ ಎನ್ನದೇ ಸಮಯ ಸಾಧಿಸಿ ಕಳ್ಳತನ ಮಾಡುತ್ತಿದ್ದಾರೆ. ಹೊರ ರಾಜ್ಯ ನೋಂದಣಿಯ ವಿವಿಧ ವಾಹನಗಳು ಈ ಭಾಗದಲ್ಲಿ ಓಡಾಟ ನಡೆಸುತ್ತಿರುವ ಬಗ್ಗೆ ಜನ ಹೇಳಿದ್ದಾರೆ. ರಾತ್ರಿ ವೇಳೆ ಬೀದಿ ದೀಪ ಸರಿಯಾಗಿಲ್ಲದಿರುವುದು ಸಹ ಕಳ್ಳರ ಪಾಲಿಗೆ ವರ ನೀಡಿದ ಹಾಗಾಗಿದೆ. ಕಳ್ಳರ ಹೆಡೆಮುರಿ ಕಟ್ಟಲು ಪೊಲೀಸರು ಶ್ರಮಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ.
`ಅಪರಿಚಿತರ ಬಗ್ಗೆ ನಿಗಾವಹಿಸಿ’