ಸಾವಿರಾರು ಜನರ ಜೀವ ಕಾಪಾಡಿದ ಕಾರವಾರದ ಡಾ ಪಿಕಳೆ ಕುಟುಂಬದ ವಿರುದ್ಧ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿದೆ.
ವೈದ್ಯಕೀಯ ಸೌಲಭ್ಯಗಳು ಸರಿಯಾಗಿ ಇಲ್ಲದ ಅವಧಿಯಲ್ಲಿ ಎಸ್ ಆರ್ ಪಿಕಳೆ ಅವರು ಕಾರವಾರದಲ್ಲಿ ಸೇವೆ ಶುರು ಮಾಡಿದ್ದರು. ಬಡವರ ಸೇವೆಗಾಗಿ ಅವರು ತಮ್ಮ ಜೀವನವನ್ನು ಮೀಸಲಿಟ್ಟಿದ್ದರು. ತಂದೆ ನಡೆದ ಹಾದಿಯಲ್ಲಿಯೇ ನಿತಿನ್ ಪಿಕಳೆ ಹಾಗೂ ಸಂಜಯ ಪಿಕಳೆ ಅವರು ಮುಂದುವರೆದಿದ್ದು, ಸಮಾಜ ಸೇವೆಯ ಜೊತೆ ವೈದ್ಯಕೀಯ ಸೇವೆಯನ್ನು ಅವರು ಮುಂದುವರೆಸಿದ್ದಾರೆ. ಈ ಕುಟುಂಬದ ಡಾ ಅನುರಾಧಾ, ಡಾ ಅರ್ಚನಾ ಅವರು ಸಹ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ.
ಡಾ ಪಿಕಳೆ ಪರಿವಾರದವರು ಹಗಲು-ರಾತ್ರಿ ಎನ್ನದೇ ವೈದ್ಯಕೀಯ ಸೇವೆಯಲ್ಲಿದ್ದಾರೆ. ತುರ್ತು ಸನ್ನಿವೇಶದ ಅವಧಿಯಲ್ಲಿ ಬಂದ ರೋಗಿಯನ್ನು ಸಹ ಅವರು ಬದುಕಿಸಿದ ಸಾಕಷ್ಟು ನಿದರ್ಶನಗಳಿವೆ. ರಾತ್ರಿ ವೇಳೆ ವೈದ್ಯರು ಮನೆಯಲ್ಲಿ ವಿಶ್ರಾಂತಿಪಡೆಯುತ್ತಿದ್ದರೂ ತುರ್ತು ಕರೆ ಬಂದಾಗ ನಿದ್ದೆಯಿಂದ ಎದ್ದು ಬಂದು ಜನರ ಜೀವ ಕಾಪಾಡಿದ ಉದಾಹರಣೆಗಳಿವೆ. ಹೀಗಿದ್ದರೂ ಆ ಬಗ್ಗೆ ಅರಿಯದ ಕೆಲವರು ಡಾ ಪಿಕಳೆ ಪರಿವಾರದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ.
ಪಿಕಳೆ ಆಸ್ಪತ್ರೆಯಲ್ಲಿನ ಸಿಬ್ಬಂದಿಯೊಬ್ಬರು ಕಣ್ತಪ್ಪಿನಿಂದ ರೋಗಿಗೆ ಅವಧಿ ಮುಗಿದ ಔಷಧಿ ನೀಡಿದ್ದಾರೆ. ತಮ್ಮಿಂದ ತಪ್ಪಾಗಿರುವುದನ್ನು ಸಹ ಆ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಬದಲಿ ಔಷಧಿ ನೀಡಿ ಕ್ಷಮೆ ಕೋರಿದ್ದಾರೆ. ಈ ವಿಷಯವನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದು, ಆಸ್ಪತ್ರೆ ಸಿಬ್ಬಂದಿಯಿOದ ಆದ ಅಚಾತುರ್ಯಕ್ಕೆ ವೈದ್ಯರ ಹೆಸರು ಕೆಡಿಸುವ ಕೆಲಸ ಮಾಡಿದ್ದಾರೆ. ಗೊತ್ತುಗುರಿಯಿಲ್ಲದ ಅನೇಕರು ಅದೇ ವಿಡಿಯೋ ಆಧಾರದಲ್ಲಿ ಡಾ ಪಿಕಳೆ ವೈದ್ಯ ಕುಟುಂಬದ ವಿರುದ್ಧ ಸದ್ಯ ಜಾಲತಾಣದಲ್ಲಿ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಜನರ ಸೇವೆಗಾಗಿ ತಮ್ಮ ವೈಯಕ್ತಿಕ ಜೀವನವನ್ನು ಕಳೆದುಕೊಂಡ ಇಡೀ ಪರಿವಾರಗಳಿಸಿದ ಹೆಸರನ್ನು ಒಂದೇ ಒಂದು ವಿಡಿಯೋ ತುಣುಕು ಹಾಳು ಮಾಡುತ್ತಿರುವ ಬಗ್ಗೆ ಜನ ಅಸಮಧಾನವ್ಯಕ್ತಪಡಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದಲ್ಲದೇ ಸಾವಿರಾರು ಬಡ ಕುಟುಂಬಗಳಿಗೆ ಆಸರೆಯಾಗಿರುವ ಪಿಕಳೆ ಆಸ್ಪತ್ರೆಯ ವಿರುದ್ಧ ವ್ಯವಸ್ಥಿತ ಸಂಚು ನಡೆಯುತ್ತಿರುವುದು ವಿಷಾದನೀಯ’ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರು ಹೇಳಿದ್ದಾರೆ. `ಪಿಕಳೆ ಕುಟುಂಬವು ಎಂದಿಗೂ ರೋಗಿಗಳ ಪ್ರಾಣದ ಜೊತೆ ಆಟವಾಡುವವರಲ್ಲ. ಅವರ ನಿಸ್ವಾರ್ಥ ಸೇವೆಗೆ ಕಾರವಾರದ ಜನತೆ ಸದಾ ಚಿರಋಣಿಯಾಗಿರಬೇಕು’ ಎಂದು ಅವರು ಹೇಳಿದ್ದಾರೆ. `ಹಾಳಾದ ಔಷಧಿ ನೀಡಿದ್ದರೆ ಆ ಬಗ್ಗೆ ಕಾನೂನು ಹೋರಾಟ ನಡೆಸಬೇಕು. ಅದರ ಬದಕು ಕಾರವಾರದ ಜನರ ಭಾವನೆಯೊಂದಿಗೆ ಬೆಸೆದುಕೊಂಡಿರುವವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ಹಿಂದೆ ಹೆಸರಿಗೆ ಮಸಿ ಬಡಿಯುವ ಪ್ರಯತ್ನದ ಶಂಕೆಯಿದೆ’ ಎಂದು ಮಾಧವ ನಾಯಕ ಅವರು ಹೇಳಿದ್ದಾರೆ.