ಅಂಕೋಲಾದ ಪವನ್ ಭಟ್ಟ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಪ್ರೀತಿಸಿದ ಯುವತಿ ಮದುವೆಗೆ ಒಪ್ಪದ ಕಾರಣ ಅವರು ಈ ದುಡುಕು ನಿರ್ಧಾರ ಮಾಡಿದ್ದಾರೆ.
Advertisement. Scroll to continue reading.
ಅಂಕೋಲಾದ ಅಸ್ಲಗದ್ದೆಯಲ್ಲಿ ಪವನ್ ಭಟ್ಟ (24) ಅವರು ವಾಸವಾಗಿದ್ದರು. ಪುರೋಹಿತರಾಗಿ ಅವರು ಬದುಕು ಕಂಡುಕೊoಡಿದ್ದರು. ಪವನ್ ಭಟ್ಟ ಅವರು ಅದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದರು. ಆ ಯುವತಿ ಸಹ ಪವನ್ ಭಟ್ಟ ಅವರ ಪ್ರೀತಿಗೆ ಮನಸೋತಿದ್ದರು. ಆದರೆ, ಎಷ್ಟು ಬಾರಿ ವಿನಂತಿಸಿದರೂ ಆ ಯುವತಿ ಪುರೋಹಿತ ಪವನ್ ಭಟ್ಟ ಅವರನ್ನು ಮದುವೆ ಆಗಲು ಮಾತ್ರ ಒಪ್ಪಿಗೆ ನೀಡಿರಲಿಲ್ಲ.
`ಮದುವೆ ಆಗು’ ಎಂದು ಪವನ್ ಭಟ್ಟ ಕೊನೆಯದಾಗಿ ಯುವತಿಯನ್ನು ಕೇಳಿಕೊಂಡರು. ಪುರೋಹಿತರಾಗಿರುವ ಕಾರಣ ವಿವಾಹ ಆಗಲು ಮನಸ್ಸಿಲ್ಲ ಎಂದು ಯುವತಿ ಹೇಳಿದನ್ನು ಕೇಳಿ ಪವನ್ ಭಟ್ಟ ಆಘಾತಕ್ಕೆ ಒಳಗಾದರು. ಪ್ರೀತಿಸಿದ ಯುವತಿ ಮದುವೆಗೆ ಒಪ್ಪದ ಕಾರಣ ಪವನ್ ಭಟ್ಟ ಮಾನಸಿಕವಾಗಿ ಕುಗ್ಗಿದ್ದರು. ಜೀವನ ಪೂರ್ತಿ ಜೊತೆಯಾಗಿರಲು ಬಯಸಿದ ಹುಡುಕಿ ದೂರವಾಗುತ್ತಿರುವುದನ್ನು ಅರಿತು ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದರು.
ಅದರಂತೆ, ಮಂಗಳವಾರ ಪವನ್ ಭಟ್ಟ ತಮ್ಮ ಬದುಕಿಗೆ ವಿದಾಯ ಹೇಳಿದರು. ನೇಣಿಗೆ ಶರಣಾಗಿ ಅವರು ಪ್ರಾಣ ಬಿಟ್ಟರು.