ಶಿರಸಿ ಗ್ರಾಮೀಣ ಭಾಗದಲ್ಲಿ ಅನುಮಾನಾಸ್ಪದ ಕಾರು ಓಡಾಟ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಆ ಕಾರಿನಲ್ಲಿದ್ದವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಜನವರಿ 16ರಂದು ಶಿರಸಿ ಸಿದ್ದಾಪುರ ಮಾರ್ಗದ ಹರೂರು ಭಾಗದಲ್ಲಿ ಅನುಮಾನಾಸ್ಪದ ಕಾರು ಓಡಾಟ ನಡೆದಿತ್ತು. ಬಸ್ಸಿಗಾಗಿ ಕಾಯುತ್ತಿದ್ದ ಹೈಸ್ಕೂಲು ವಿದ್ಯಾರ್ಥಿನಿಯರ ಜೊತೆ ಕಾರಿನಲ್ಲಿದ್ದವರು ಅನುಮಾನಾಸ್ಪದ ರೀತಿ ವರ್ತಿಸಿದ ಆರೋಪವ್ಯಕ್ತವಾಗಿತ್ತು. ಆ ವೇಳೆ ಅಲ್ಲಿಗೆ ಬಂದ ಬಸ್ಸಿನಲ್ಲಿದ್ದ ಬ್ಯಾಂಕ್ ಉದ್ಯೋಗಿಯೊಬ್ಬರು ಕಾರಿನಲ್ಲಿದ್ದವರನ್ನು ಪ್ರಶ್ನಿಸಿದ್ದರು. ಕಾರಿನಲ್ಲಿದ್ದವರು ಮಾತನಾಡಲು ತಡವರಿಸಿದ ಕಾರಣ ಅವರ ಮೇಲೆ ಅನುಮಾನ ಹೆಚ್ಚಾಗಿದ್ದು, ಅಪರಿಚಿತರ ಓಡಾಟ ಹಾಗೂ ಮಕ್ಕಳ ಸುರಕ್ಷತೆಯ ಬಗ್ಗೆ ಬ್ಯಾಂಕಿನ ಮಹಿಳಾ ಉದ್ಯೋಗಿ ಮಾಹಿತಿ ಹಂಚಿಕೊoಡಿದ್ದರು.
ಈ ಬಗ್ಗೆ ಮೊಬೈಲ್ ಮಿಡಿಯಾ ನೆಟ್ವರ್ಕನ mobiletime.in ವರದಿ ಪ್ರಸಾರ ಮಾಡಿದ್ದು, ಅನುಮಾನಾಸ್ಪದ ಕಾರು ಓಡಾಟದ ಬಗ್ಗೆ ಆ ಭಾಗದ ಶಿಕ್ಷಕ ವಿಘ್ನೇಶ್ವರ ಭಟ್ಟ ಅವರು 112 ಸಹಾಯವಾಣಿಗೆ ಫೋನ್ ಮಾಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರಿನ ಮಾಹಿತಿ ಕಲೆ ಹಾಕಿದರು. ಆ ಕಾರಿನಲ್ಲಿದ್ದವರ ದಾಖಲೆಗಳನ್ನು ಪರಿಶೀಲನೆ ಮಾಡಿದರು. ಬೆಂಗಳೂರಿನಿAದ ಬಂದಿದ್ದ ಸಂತೋಷ ಹೆಗಡೆ ಎಂಬಾತರು ಚಾರಪುಲಿಯ ಶ್ರೀಧರ ಹೆಗಡೆ ಅವರ ಮನೆಗೆ ಹೋಗಬೇಕಿದ್ದು, ದಾರಿ ಗೊತ್ತಾಗದೇ ಬಸ್ ನಿಲ್ದಾಣ ಬಳಿ ನಿಂತಿರುವುದಾಗಿ ಸಮಜಾಯಿಶೀ ನೀಡಿದರು. `ವಿಳಾಸ ಕೇಳುವುದಕ್ಕಾಗಿ ಹೈಸ್ಕೂಲ್ ಮಕ್ಕಳ ಬಳಿ ಮಾತನಾಡಿದ್ದೇವೆ. ಅವರ ಜೊತೆ ಅನುಚಿತವಾಗಿ ವರ್ತಿಸಿಲ್ಲ’ ಎಂದು ಸಂತೋಷ ಹೆಗಡೆ ಹಾಗೂ ಅವರ ಸಹಚರರು ಸಮರ್ಥಿಸಿಕೊಂಡರು.
ಅದಾದ ನಂತರ ಪೊಲೀಸರು ಶ್ರೀಧರ ಹೆಗಡೆ ಅವರನ್ನು ಸಹ ಸಂಪರ್ಕಿಸಿ ಆ ಅಪರಿಚಿತರ ಬಗ್ಗೆ ವಿಚಾರಿಸಿದರು. `ಆ ವ್ಯಕ್ತಿಗಳು ತಮ್ಮ ಮನೆಗೆ ಬಂದಿದ್ದು ಸತ್ಯ’ ಎಂದು ಶ್ರೀಧರ ಹೆಗಡೆ ಅವರು ಸಾಕ್ಷಿ ಹೇಳಿದರು. ಜಗದಾಂಬಾ ಪ್ರೌಢಶಾಲೆ ಅಧ್ಯಕ್ಷ ಎಂ ಜಿ ಹೆಗಡೆ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು. ಅವರೆಲ್ಲರ ಗುರುತಿನ ಚೀಟಿ ತಪಾಸಣೆ ಹಾಗೂ ಕಾರು ತಪಾಸಣೆ ಮಾಡಿದ ಬಳಿಕ ಎಚ್ಚರಿಕೆ ನೀಡಿ ಪೊಲೀಸರು ಬಿಟ್ಟರು. ಶಿರಸಿ ಗ್ರಾಮೀಣ ಪೊಲೀಸರ ಜೊತೆ ಸಿದ್ದಾಪುರ ಪೊಲೀಸರು ಸಹ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲರೂ ಸೇರಿ ಮಕ್ಕಳ ಆತಂಕವನ್ನು ದೂರ ಮಾಡಿದರು.
`ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಗಮನಹರಿಸಿ. ತುರ್ತು ಸನ್ನಿವೇಶಗಳಲ್ಲಿ 112ಗೆ ಫೋನ್ ಮಾಡಿ’