ಮದುವೆ ಆಗುವುದಾಗಿ ನಂಬಿಸಿ ಮಹಿಳೆಗೆ ಮೋಸ ಮಾಡಿದ ಯುವಕನನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಜೊತೆ ಸರಸ-ಸಲ್ಲಾಪ ನಡೆಸಿದ ನಂತರ ಪರಾರಿಯಾಗಿದ್ದ ಕಿರಣ ಮೊಗೇರ್ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಶಿರಸಿ ಬರೂರು ಬಳಿಯ ಅರಸಿಕೇರಿಯ ಕಿರಣ ಶಾಂತರಾಮ ಮೊಗೇರ (25) ಅವರು ಕಾರವಾರದ ಕನ್ಯೆಯೊಬ್ಬರ ಮೋಹಕ್ಕೆ ಬಿದ್ದಿದ್ದರು. ಅವರ ಬೆನ್ನು ಬಿದ್ದು ಪ್ರೀತಿಸುವಂತೆ ಕಾಟ ಕೊಡುತ್ತಿದ್ದರು. ಆ ಯುವತಿ ಕಿರಣ ಮೊಗೇರ್ ಅವರ ಪ್ರೇಮಕ್ಕೆ ಒಪ್ಪಿಗೆ ನೀಡಿದ್ದು, ನಂತರ ಕಿರಣ ಮೊಗೇರ್ ಅದನ್ನು ದುರುಪಯೋಗಪಡಿಸಿಕೊಂಡಿದ್ದರು.
ಸಾಮಾಜಿಕ ಜಾಲತಾಣವಾದ ಇನಸ್ಟಾಗ್ರಾಮಿನಲ್ಲಿ ಯುವತಿಯನ್ನು ಪರಿಚಯಿಸಿಕೊಂಡ ಕಿರಣ ಮೊಗೇರ್ ಆಕೆಯನ್ನು ಪುಸಲಾಯಿಸಿ ಲೈಂಗಿಕ ಸಂಪರ್ಕ ಮಾಡಿದ್ದರು. ಕೊನೆಗೆ ಮದುವೆ ಆಗದೇ ಮೋಸ ಮಾಡಿದ್ದರು. ಸಂತ್ರಸ್ತ ಮಹಿಳೆಗೆ ಈಗಾಗಲೇ ಒಂದು ಮದುವೆ ಆಗಿದ್ದು, ಎರಡು ಮಕ್ಕಳಿದ್ದರು. ಅದಾಗಿಯೂ ಆ ಮಹಿಳೆ ಮೋಹಕ್ಕೆ ಒಳಗಾದ ಕಿರಣ ಮೊಗೇರ್ ಅವರನ್ನು ಪುಸಲಾಯಿಸಿದ್ದರು.
ಆ ಮಹಿಳೆಯನ್ನು ತಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ಅವರ ಜೊತೆ ವಾಸವಾಗಿರುವಾಗಲೇ ಲೈಂಗಿಕ ದೌರ್ಜನ್ಯ ಎಸಗಿದ್ದರು. ನಂತರ ಮಹಿಳೆಗೆ ಬೈದು ಮನೆಯಿಂದ ಹೊರ ಹಾಕಿದ್ದರು. ಹೀಗಾಗಿ ಮಹಿಳೆ ದೂರಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.