ಮೆದುಳು ರೋಗಕ್ಕೆ ಬೆದರಿದ ಮಹಿಳೆಯೊಬ್ಬರು ಮುರುಡೇಶ್ವರದಲ್ಲಿ ಉರುಳು ಹಾಕಿಕೊಂಡಿದ್ದಾರೆ.
ಭಟ್ಕಳ ತಾಲೂಕಿನ ಮುರುಡೇಶ್ವರದ ಮಾವಳ್ಳಿ ಸೋನಾರಕೇರಿಯ ಗುಲಾಬಿ ಸುಕ್ರಾ ನಾಯ್ಕ (35) ಅವರು ವಾಸವಾಗಿದ್ದರು. ಮನೆ ಕೆಲಸ ಮಾಡಿಕೊಂಡಿದ್ದ ಅವರಿಗೆ 15 ವರ್ಷದ ಹಿಂದೆ ಮೆದುಳು ಸಂಬoಧಿಸಿದ ರೋಗ ಕಾಣಿಸಿಕೊಂಡಿತ್ತು. ಕೆಲ ಕಾಲದ ನಂತರ ಪೀಡ್ಸ ಸಹ ಶುರುವಾಗಿದ್ದು, ಅನಾರೋಗ್ಯದ ಕಾರಣ ಗುಲಾಬಿ ನಾಯ್ಕ ಅವರು ಸದಾ ಮಂಕಾಗಿರುತ್ತಿದ್ದರು.
ದಿನದಿAದ ದಿನಕ್ಕೆ ಗುಲಾಬಿ ನಾಯ್ಕ ಅವರ ಮಾನಸಿಕ ಸ್ಥಿತಿ ಹದಗೆಟ್ಟಿತು. ರೋಗದ ಬಗ್ಗೆ ಯೋಚಿಸುತ್ತಿದ್ದ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದರು. ಫೆ 12ರಂದು ಮನೆಯ ಕೋಣೆಗೆ ಹೋದ ಅವರು ಅಲ್ಲಿಯೇ ನೇಣಿಗೆ ಶರಣಾದರು. ಸಮೃದ್ಧಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡುವ ಮುಕ್ತಾ ನಾಯ್ಕ ಅವರು ಅಕ್ಕನ ಸಾವಿನ ಬಗ್ಗೆ ಮಾಹಿತಿ ನೀಡಿದರು. ಮುರುಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದರು.
`ಆತ್ಮಹತ್ಯೆ ಅಪರಾಧ’