ಪಿಎಂ ಕಿಸಾನ್ ಸಹಾಯಧನ ಸೇರಿ ಕೃಷಿ ಇಲಾಖೆಯ ಯೋಜನೆಗಳ ಪ್ರಯೋಜನಪಡೆಯಲು ಪ್ರತಿಯೊಬ್ಬರು ಪ್ರೂಟ್ ಐಡಿ ಪಡೆಯುವುದು ಕಡ್ಡಾಯವಾಗಿದೆ. ಈ ಹಿನ್ನಲೆ ಫೋನ್ ಮೂಲಕವೇ ಪ್ರೂಟ್ ಐಡಿ ಮಾಡಿಕೊಡಲು ಗ್ರಾಮ ಒನ್ ಕೇಂದ್ರವೊoದು ಆಸಕ್ತಿವಹಿಸಿದೆ.
ಫೆಬ್ರವರಿ 26ರ ಒಳಗೆ ಪ್ರತಿಯೊಬ್ಬ ರೈತರು ಪ್ರೂಟ್ ಐಡಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಕೃಷಿ ಇಲಾಖೆ ಫಾರ್ಮಾನು ಹೊರಡಿಸಿದೆ. ಸಮೀಪದ ಗ್ರಾಮ ಕೇಂದ್ರ ಅಥವಾ ಕೃಷಿ ಸಂಪರ್ಕಕ್ಕೆ ಕೇಂದ್ರಕ್ಕೆ ಭೇಟಿ ನೀಡಿ ಈ ಐಡಿ ಮಾಡಿಸಿಕೊಳ್ಳಬೇಕಿದೆ. ಈಗಾಗಲೇ ಐಡಿ ಹೊಂದಿದವರು ಸಹ ಅದನ್ನು ನವೀಕರಿಸುವಂತೆ ಸೂಚಿಸಲಾಗಿದ್ದು, ಈ ಕೆಲಸ ಮಾಡಲು ಆಧಾರ್ ಕಾರ್ಡ ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂ ಇದ್ದರೆ ಸಾಕು.
ಈ ಕೆವೈಸಿ ಮಾಡಿಸದಿದ್ದರೆ ಪಿಎಂ ಕಿಸಾನ್ ಸೇರಿದಂತೆ ವಿವಿಧ ಸರಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಅರಿತು ಯಲ್ಲಾಪುರದ ನಂದೂಳ್ಳಿ ಗ್ರಾಮ ಒನ್ ಕೇಂದ್ರದವರು ಫೋನ್ ಮೂಲಕ ಪ್ರೂಟ್ಸ್ ಐಡಿ ಮಾಡಿಕೊಡುವುದಾಗಿ ಘೋಷಿಸಿದ್ದಾರೆ. 9480362267 ಸಂಖ್ಯೆಗೆ ಆಧಾರ್ ಪ್ರತಿ ವಾಟ್ಸಪ್ ಮಾಡಿ, ಫೋನ್ ಮಾಡಿದಲ್ಲಿ ಈ ಸೇವೆ ದೊರೆಯಲಿದೆ.