ಹೊನ್ನಾವರದ ರೋಹಿತಕುಮಾರ ಚಪ್ಪಡಿ ಅವರು ಪ್ರಾನ್ಸಿಸ್ ಅಲ್ಮೋಡಾ ಅವರ ಮನೆಗೆ ನುಗ್ಗಿ 10 ಲಕ್ಷ ರೂ ಮೌಲ್ಯದ ಚಿನ್ನ ಕದ್ದಿದ್ದಾರೆ. ಅದಾದ ನಂತರ ರೋಹಿತಕುಮಾರ ಅವರು ಪರಾರಿಯಾಗಿದ್ದು, ಆ ಚಿನ್ನಾಭರಣ ಮರಳಿಪಡೆಯುವುದಕ್ಕಾಗಿ ಪ್ರಾನ್ಸಿಸ್ ಅಲ್ಮೋಡಾ ಅವರು ಅಲೆದಾಡುತ್ತಿದ್ದಾರೆ.
ಹೊನ್ನಾವರ ಪಡಕುಳಿಯ ಶಿವಳ್ಳಿಕೇರಿಯಲ್ಲಿ ಪ್ರಾನ್ಸಿಸ್ ಪಿಲಿಪ್ ಅಲ್ಮೋಡಾ ಅವರು ವಾಸವಾಗಿದ್ದಾರೆ. ವಿವಿಧ ವ್ಯಾಪಾರವನ್ನು ಹೊಂದಿದ ಪ್ರಾನ್ಸಿಸ್ ಅಲ್ಮೋಡಾ ಅವರು ಹಳೆಯ ಕಾಲದಲ್ಲಿಯೇ ವಿವಿಧ ಚಿನ್ನಾಭರಣವನ್ನು ಮಾಡಿಸಿದ್ದರು. ಆ ಚಿನ್ನಾಭರಣಗಳ ಮೇಲೆ ಪ್ರಾನ್ಸಿಸ್ ಅವರ ಅಕ್ಕನ ಮಗನಾದ ರೋಹಿತಕುಮಾರ ರವಿಕುಮಾರ ಚಪ್ಪಡಿ ಅವರು ಕಣ್ಣಿಟ್ಟಿದ್ದರು.
ರೋಹಿತಕುಮಾರ ಚಪ್ಪಡಿ ಅವರು ಹೊಟೇಲ್ ಕೆಲಸ ಮಾಡಿಕೊಂಡಿದ್ದು, ಪ್ರಾನ್ಸಿಸ್ ಅಲ್ಮೋಡಾ ಅವರೇ ರೋಹಿತಕುಮಾರ ಅವರಿಗೆ ಆಶ್ರಯ ನೀಡಿದ್ದರು. ಪಡಕುಳಿ ಬಳಿಯ ಶಿವಳ್ಳಿಕೇರಿಯವರೇ ಆದ ರೋಹಿತಕುಮಾರ ಅವರನ್ನು ಪ್ರಾನ್ಸಿಸ್ ಅಲ್ಮೋಡಾ ಅವರು 2025ರ ಡಿಸೆಂಬರ್ 10ರಿಂದ 16ರವರೆಗೆ ಮನೆಗೆ ಕರೆಯಿಸಿಕೊಂಡಿದ್ದರು. ಆ ಅವಧಿಯಲ್ಲಿ ರೋಹಿತಕುಮಾರ ಅವರು ಮನೆಯಲ್ಲಿದ್ದ ಚಿನ್ನಾಭರಣವನ್ನು ಕದ್ದು ಪರಾರಿಯಾದರು.
ರೋಹಿತಕುಮಾರ ಅವರಿಗಾಗಿ ಪ್ರಾನ್ಸಿಸ್ ಡಿಸೋಜಾ ಎಲ್ಲಾ ಕಡೆ ಹುಡುಕಿದರು. ಆದರೂ, ಅವರು ಸಿಗದ ಕಾರಣ ಪೊಲೀಸರ ಮೊರೆ ಹೋದರು. ಕಾಣೆಯಾದ ಅಕ್ಕನ ಮಗನ ಜೊತೆ ಕಳೆದಿರುವ ಚಿನ್ನವನ್ನು ಹುಡುಕಿಕೊಡಿ ಎಂದು ಅವರು ಪೊಲೀಸ್ ದೂರು ನೀಡಿದರು. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.