ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದ ಪರಿಣಾಮ ಕುಮಟಾ ಅಳ್ವೆಕೊಡಿಯ ಲವ ರ‍್ಮಲಕರ ಅವರು ಸಾವನಪ್ಪಿದ್ದಾರೆ. ಎರಡು ತಿಂಗಳ ಹಿಂದೆ ಅವರಿಗೆ ಶುಗರ್ ಕಾಣಿಸಿಕೊಂಡಿದ್ದು, ಚಿಕಿತ್ಸೆಪಡೆದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಕುಮಟಾದ ಅಳ್ವೇಕೊಡಿಯಲ್ಲಿ ಲವ ಗೋವಿಂದ ರ‍್ಮಲಕರ (42) ಅವರು ವಾಸವಾಗಿದ್ದರು. ಚಾಲಕರಾಗಿ ಅವರು ಬದುಕು ಕಟ್ಟಿಕೊಂಡಿದ್ದರು. ಎರಡು ತಿಂಗಳ ಹಿಂದೆ ಆರೋಗ್ಯದಲ್ಲಿ ವ್ಯತ್ಯಾಸವಾದ ಕಾರಣ ಅವರು ತಪಾಸಣೆಗೆ ಒಳಗಾದರು. ಆಗ, ಅವರಿಗೆ ಶುಗರ್ ಕಾಯಿಲೆಯಿರುವುದು ಗೊತ್ತಾಯಿತು.
ಈ ರೋಗಕ್ಕೆ ಅವರು ವಿವಿಧ ಔಷಧಿಗಳನ್ನುಪಡೆದರು. ಆದರೆ, ರೋಗ ದೂರವಾಗಲಿಲ್ಲ. ಫೆಬ್ರವರಿ 7ರಂದು ಅವರು ತಮ್ಮ ಹಿತ್ತಲಿನಲ್ಲಿ ಶವವಾಗಿದ್ದರು. ಹೃದಯಘಾತ ಅಥವಾ ಶುಗರ್ ರೋಗದಿಂದ ಅವರು ಸಾವನಪ್ಪಿರುವ ಬಗ್ಗೆ ಸಹೋದರ ಉಮೇಶ ರ‍್ಮಲಕರ್ ಅವರು ಮಾಹಿತಿ ನೀಡಿದ್ದು, ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದರು.