ಮನೆಯಲ್ಲಿ ಬೆಕ್ಕು ಹಾಗೂ ನಾಯಿಗಳನ್ನು ಸಾಕಲು ವಿರೋಧವ್ಯಕ್ತವಾದ ಕಾರಣ ಅಂಕೋಲಾದ ಕವಿತಾ ಹರಿಕಂತ್ರ ಅವರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಆತ್ಮಹತ್ಯೆಯ ನಿರ್ಧಾರ ಮಾಡಿದ ಅವರು ಸಜೀವ ದಹನವಾಗಿದ್ದಾರೆ.
ಅಂಕೋಲಾದ ಹಾರವಾಡದ ಸೀಬರ್ಡ ಕಾಲೋನಿಯಲ್ಲಿ ಕವಿತಾ ಚೇತನ ಹರಿಕಂತ್ರ (40) ಅವರು ವಾಸವಾಗಿದ್ದರು. ಮನೆಯಲ್ಲಿಯೇ ಕೆಲಸ ಮಾಡಿಕೊಂಡಿದ್ದ ಅವರು ಬೆಕ್ಕು ಹಾಗೂ ನಾಯಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಹೀಗಾಗಿ ಅವರು ತಮ್ಮ ಜೊತೆ ಬೆಕ್ಕು-ನಾಯಿಗಳ ಆರೈಕೆ ಮಾಡುತ್ತಿದ್ದರು. ಆದರೆ, ಕವಿತಾ ಹರಿಕಂತ್ರ ಅವರ ಅತ್ತೆಗೆ ಬೆಕ್ಕು-ನಾಯಿಗಳೆಂದರೆ ಆಗಿ ಬರುತ್ತಿರಲಿಲ್ಲ.
ಹೀಗಾಗಿ ಕವಿತಾ ಹರಿಕಂತ್ರ ಅವರನ್ನು ಅವರ ಅತ್ತೆ ನಿಂದಿಸುತ್ತಿದ್ದರು. ಇದರಿಂದ ಕವಿತಾ ಹರಿಕಂತ್ರ ಅವರು ಬೇಸರಕ್ಕೆ ಒಳಗಾಗಿದ್ದರು. ಅತ್ತೆ ಬೈದ ಕಾರಣ ಅವರು ಹಿಂದೊಮ್ಮೆ ಪಿನೈಲ್ ಸೇವಿಸಿದ್ದರು. ಆ ವೇಳೆ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದರು. ಅದಾದ ನಂತರ ಮತ್ತೊಮ್ಮೆ ಸೀಮೆಎಣ್ಣೆಯನ್ನು ಮೈಮೇಲೆ ಸುರಿದುಕೊಂಡಿದ್ದರು. ಆಗಲೂ, ಅವರನ್ನು ಕುಟುಂಬದವರು ಉಳಿಸಿಕೊಂಡಿದ್ದರು.
ಹೀಗಿರುವಾಗ ಫೆಬ್ರವರಿ 9ರ ರಾತ್ರಿ ಕವಿತಾ ಹರಿಕಂತ್ರ ಅವರು ಮತ್ತೊಮ್ಮೆ ಆತ್ಮಹತ್ಯೆಯ ನಿರ್ಧಾರ ಮಾಡಿದರು. ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡ ಅವರು ಬೆಂಕಿ ಹಂಚಿಕೊAಡರು. ಮನೆ ಹಿಂಬದಿ ಅವರು ಸುಟ್ಟು ಶವವಾದರು. ಸದ್ಯ ಅಂಕೋಲಾದ ಹೊನ್ನೆಬೈಲಿನಲ್ಲಿ ವಾಸವಾಗಿರುವ ಮುರುಡೇಶ್ವರ ಮಾವಳ್ಳಿಯ ಮಾರುತಿ ನೀಲಜ್ಜ ಹರಿಕಂತ್ರ ಅವರು ಅಕ್ಕನ ಸಾವಿನ ಬಗ್ಗೆ ಪೊಲೀಸರಿಗೆ ತಿಳಿಸಿದರು. ಪೊಲೀಸರು ಪ್ರಕರಣ ದಾಖಲಿಸಿದರು.