ಶಿರಸಿ ಜಾತ್ರೆಯ ಸನ್ನಿವೇಶ ದುರುಪಯೋಗಪಡಿಸಿಕೊಂಡು ದರೋಡೆಗೆ ಸಿದ್ಧತೆ ಮಾಡಿಕೊಂಡಿದ್ದ ಡಕಾಯಿತರಿಗೆ ಭಾರೀ ಹಿನ್ನಡೆಯಾಗಿದೆ. ಶಿರಸಿಗೆ ಹೊರಡಲು ಸಿದ್ಧವಾಗಿದ್ದ ಡಕಾಯಿತರನ್ನು ಯಲ್ಲಾಪುರ ಪೊಲೀಸರು ದಾರಿ ಮದ್ಯೆಯೇ ತಡೆದಿದ್ದಾರೆ.
Advertisement. Scroll to continue reading.
ದಕ್ಷಿಣ ಭಾರತದಲ್ಲಿ ಎಲ್ಲಿಯೇ ಜಾತ್ರೆ ನಡೆದರೂ ಮಹಾರಾಷ್ಟದ ಎಂಟು ಜನ ಅಲ್ಲಿ ಹಾಜರಾಗುತ್ತಿದ್ದರು. ಈ ಮೊದಲು ಗೋಕರ್ಣ, ಮುರುಡೇಶ್ವರದಲ್ಲಿಯೂ ಆ ಡಕಾಯಿತರು ತಮ್ಮ ಕೈ ಚಳಕ ಪ್ರದರ್ಶಿಸಿದ್ದರು. ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಾಗ ಮುಖಕ್ಕೆ ಖಾರದಪುಡಿ ಎರಚಿ ಪರಾರಿಯಾಗುತ್ತಿದ್ದರು. ಅದಾಗಿಯೂ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಕಲ್ಲು ತೂರಾಟ ನಡೆಸಿ ಕಾರು ಓಡಿಸುತ್ತಿದ್ದರು. ಅಂಥ ಎಂಟು ಜನ ಡಕಾಯಿತರು ಸೇರಿ ಶಿರಸಿ ಜಾತ್ರೆಗೆ ಹೋಗಲು ಯೋಚಿಸಿದ್ದು, ಬುಧವಾರ ನಸುಕಿನಲ್ಲಿ ಯಲ್ಲಾಪುರ ಪೊಲೀಸರು ಕೆ ಮಿಲನ್ ಹೊಟೇಲ್ ಬಳಿ ಅನುಮಾನಾಸ್ಪದ ಕಾರನ್ನು ಪಿಸೈ ಸಿದ್ದಪ್ಪ ಗುಡಿ ಅವರು ತಡೆದು ನಿಲ್ಲಿಸಿದರು.
Advertisement. Scroll to continue reading.
ಪಿಸೈ ರಾಜಶೇಖರ್ ವಂದಲಿ ಅವರ ಜೊತೆ ಅನೀಲ ಮಾದರ್, ಮಹಾಂತೇಶ ಕುಂಬಾರ್, ಎಸೈ ಗಜಾನನ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿ ಮಹಮದ್ ಶಫೀ ಶೇಖ್, ರಾಜೇಶ ನಾಯ್ಕ, ಬಸವರಾಜ ಹಗರಿ ಕಾರಿನಲ್ಲಿದ್ದವ ವಿಚಾರಣೆ ನಡೆಸಿದರು. ಮಹಾರಾಷ್ಟçದ ಆಟೋ ಚಾಲಕರಾದ ಉಮೇಶ ಗಾಯಕವಾಡ, ಶ್ರೀನಾಥ ಜಾದವ್, ಪ್ರಶಾಂತ ಪವಾರ್, ದೀಪಕ ದುಂಬಾನಿ ಜೊತೆ ಬಟ್ಟೆ ವ್ಯಾಪಾರಿಯ ಸುಂದರ ಗಾಯಕವಾಡ, ಪ್ಲಂಬರ್ ಲಖನ್ ಜಾದವ್ ಅವರು ತಮ್ಮ ಪರಿಚಯ ಮಾಡಿಕೊಂಡರು. ಪೊಲೀಸ್ ಸಿಬ್ಬಂದಿ ಪ್ರಶಾಂತ ಪಾವುಸ್ಕರ್, ಚಂದ್ರಪ್ಪ, ಶೋಭಾ ನಾಯ್ಕ, ರೇಖಾ ಎಂ ಎಸ್, ಶ್ರೀಕಾಂತ ಕಟಪರ್, ಪರಮೇಶ್ವರ ಬೆಂಡ್ಲಗಟ್ಟಿ ಅವರು ಜೊತೆಯಿದ್ದ ನಾಗುಬಾಯಿ ಜಾದವ್ ಹಾಗೂ ಅಂಬಿಕಾ ಜಾದವ್ ಅವರನ್ನು ವಿಚಾರಣೆಗೆ ಒಳಪಡಿಸಿದರು.
ಆಗ ಅವರೆಲ್ಲರೂ ಶಿರಸಿ ಜಾತ್ರೆಗೆ ಹೊರಟಿರುವುದಾಗಿ ಹೇಳಿದರು. ಈ ವೇಳೆ ಅಲ್ಲಿಗೆ ಯಲ್ಲಾಪುರ ಪಿಐ ರಮೇಶ ಹಾನಾಪುರ ಅವರು ಸ್ಥಳಕ್ಕೆ ಆಗಮಿಸಿದರು. ಗೋಕರ್ಣ ಪಿಐ ಶ್ರೀಧರ ಎಸ್ ಆರ್ ಕಾರ್ಯಾಚರಣೆಯ ಭಾಗವಾಗಿ ಆ ಡಕಾಯಿತರ ದರೋಡೆ ಶೈಲಿ ಗಮನಿಸಿದರು. ಪೊಲೀಸ್ ಸಿಬ್ಬಂದಿ ಗಿರೀಶ ಲಮಾಣಿ, ಪರಮೇಶ್ವರ ಎಸ್, ನಾಗರಾಜ ನಾಯ್ಕ, ಸುರೇಶ, ಮಹಾವೀರ, ಚನ್ನಕೇಶವ, ರಾಚಪ್ಪ, ಗಂಗಾಧರ, ಸಂತೋಷ ಬಾಳೇರ್ ಅವರು ಪೊಲೀಸ್ ಭಾಷೆಯಲ್ಲಿ ಪ್ರಶ್ನಿಸಿದರು. ಪೊಲೀಸರು ಆ ಎಂಟು ಜನರನ್ನು ತೀವೃವಾಗಿ ವಿಚಾರಣೆ ನಡೆಸಿದಾಗ ಪ್ರವಾಸಿ ತಾಣ, ದೇವಾಲಯಗಳಿಗೆ ನಿರಂತರ ಭೇಟಿ ನೀಡುತ್ತಿರುವುದು ಗೊತ್ತಾಯಿತು. ಜನ ಸಂದಣಿ ಹೆಚ್ಚಿರುವ ಕಡೆ ಹೋಗಿ ಕಳ್ಳತನ ಮಾಡುವುದು ಹಾಗೂ ದರೋಡೆ ಮಾಡುತ್ತಿದ್ದವರು ಅವರೇ ಎಂಬುದು ಖಾತ್ರಿಯಾಯಿತು. ಕಳೆದ ನಾಲ್ಕು ವರ್ಷಗಳಿಂದ ಇಂಥ ಕೃತ್ಯ ನಡೆಸುತ್ತಿರುವುದಾಗಿ ಅವರೆಲ್ಲರೂ ತಪ್ಪು ಒಪ್ಪಿಕೊಂಡರು.
ಆ ಡಕಾಯಿತರ ಬಳಿಯಿದ್ದ ಮಂಕಿ ಕ್ಯಾಪ್, ಖಾರದಪುಡಿ, ಕಬ್ಬಿಣದ ರಾಡ್ ಹಾಗೂ ಮೊಬೈಲನ್ನು ಪೊಲೀಸರು ವಶಕ್ಕೆಪಡೆದರು. ಆ ಎಲ್ಲರನ್ನು ಜೈಲಿಗೆ ಕಳುಹಿಸಿದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ ಎನ್, ಕೃಷ್ಣಮೂರ್ತಿ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರು ಪೊಲೀಸರ ಈ ಸಾಧನೆಗೆ ಮೆಚ್ಚುಗೆವ್ಯಕ್ತಪಡಿಸಿದರು.