ಶಿರಸಿ ಜಾತ್ರೆ ಹಿನ್ನಲೆ ವಿವಿಧ ಮಾರ್ಗಗಳ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಜಾತ್ರೆ ಅಂಗವಾಗಿ ಎರಡು ದಿನ ಮದ್ಯ ಮಾರಾಟ-ಸಾಗಾಟವನ್ನು ನಿಷೇಧಿಸಿ ಅವರು ಆದೇಶಿಸಿದ್ದಾರೆ.
ಫೆಬ್ರವರಿ 24ರಿಂದ ಮಾರ್ಚ 4ರವರೆಗೆ ಶಿರಸಿಯಲ್ಲಿ ಮಾರಿಕಾಂಬಾ ಜಾತ್ರೆ ನಡೆಯಲಿದೆ. ಜನರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವದಕ್ಕಾಗಿ ಶಿರಸಿ ಶಹರ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿ 77 ಮತ್ತು ರಾಷ್ಟ್ರೀಯ ಹೆದ್ದಾರಿ 766(ಇ) ಸಚಾರ ಮಾರ್ಗಗಳ ಬದಲಾವಣೆ ಮಾಡಲಾಗಿದೆ. ಅದರ ಪ್ರಕಾರ, ಮಾರ್ಚ 4ರ ಮಧ್ಯ ರಾತ್ರಿ 12ಗಂಟೆಯವರೆಗೆ ಶಿರಸಿ ಶಹರದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ 766(ಇ) ರಲ್ಲಿ ಐದು ರಸ್ತೆ ವೃತ್ತದಿಂದ – ವಾಜಿ ಚೌಕ್, ಬಿಡ್ಡಿ ವೃತ್ತ, ಕಾಮತ ಹೋಟೆಲ್ ಕ್ರಾಸ್, ಮಂಗಳೂರ ಹೊಟೆಲ್ ಕ್ರಾಸಿನಿಂದ ಕೋಟೆಕೇರೆ ವೃತ್ತದವರೆಗೆ ಎಲ್ಲ ತರಹದ ವಾಹನಗಳ ಸಂಚಾರನ್ನು ನಿಷೇಧಿಸಲಾಗಿದೆ.
ಇದರೊಂದಿಗೆ ಕುಮಟಾ ಸಿದ್ದಾಪುರ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಶಿರಸಿ ಶಹರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766(ಇ)ರಲ್ಲಿ ಸಂಚರಿಸುವ ವಾಹನಗಳನ್ನು ಪರ್ಯಾಯ ಮಾರ್ಗವಾಗಿ ಐದು ರಸ್ತೆ ಯಿಂದ ಝೂ ವೃತ್ತ -ರಾಘವೇಂದ್ರ ಅಶ್ವಿನಿ ವೃತ್ತ, ಮಹಾಸತಿ ವೃತ್ತದಿಂದ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುವಂತೆ ಹಾಗೂ ಬನವಾಸಿ ಕಡೆಗೆ ಹೋಗುವ ವಾಹನಗಳಿಗೆ ಮಹಾಸತಿ ವೃತ್ತದಿಂದ ಎ ಪಿ ಎಂ ಸಿ ಮಾರ್ಗವಾಗಿ ಕೋಟೆಕೇರೆ ವೃತ್ತದಿಂದ ಸಿರ್ಸಿಕರ ಪ್ಲಾಟ್ ಮಾರ್ಗವಾಗಿ ಬನವಾಸಿ ರಸ್ತೆ ಮುಖಾಂತರ ಸಂಚರಿಸುವAತೆ ಸೂಚಿಸಲಾಗಿದೆ. ಶಿರಸಿ ಶಹರದಲ್ಲಿ ಹಾದು ಹೋದ ರಾಜ್ಯ ಹೆದ್ದಾರಿ 77ರಲ್ಲಿ ರಾಮನಬೈಲ್ ಕ್ರಾಸ್ದಿಂದ ಮಾರಿಕಾಂಬಾ ದೇವಸ್ಥಾನ ಮಾರ್ಗವಾಗಿ ಕಾಮತ ಹೊಟೆಲ್ ಕ್ರಾಸ್ ವರೆಗೆ ಎಲ್ಲ ತರಹದ ವಾಹನಗಳ ಸಂಚಾರನ್ನು ನಿಷೇಧಿಸಿದೆ. ಬನವಾಸಿ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಶಿರಸಿ ಶಹರದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ 77ರಲ್ಲಿ ಸಂಚರಿಸುವ ವಾಹನಗಳನ್ನು ಪರ್ಯಾಯ ಮಾರ್ಗವಾಗಿ ಸಿರ್ಸಿಕರ ಪ್ಲಾಟ್-ಕರಿಗುಂಡಿ ರಸ್ತೆ, ಕೋಟೆಕೇರೆ ಎ ಪಿ ಎಂ ಸಿ ವೇ ಬ್ರಿಜ್ದಿಂದ ಹುಬ್ಬಳ್ಳಿ ಹಾವೇರಿ ಮತ್ತು ಎ ಪಿ ಎಂ ಸಿ ಮಾರ್ಗವಾಗಿ ಯಲ್ಲಾಪುರ ಕುಮಟಾ ಸಿದ್ದಾಪುರ ಮಾರ್ಗವಾಗಿ ಸಂಚರಿಸುವoತೆ ಸೂಚಿಸಲಾಗಿದೆ.
Advertisement. Scroll to continue reading.
ಇನ್ನೂ ಸಿದ್ದಾಪುರ ಮತ್ತು ಕುಮಟಾ ಕಡೆಯಿಂದ ಬರುವ ಲಘು ವಾಹನಗಳನ್ನು ಪಾರ್ಕಿಂಗ್ ಸ್ಥಳಕ್ಕೆ ಹೋಗಲು ರಸ್ತೆ ಕಿರಿದಾಗಿರುವುದರಿಂದ ಅಲೇಕಾ ಗೇಟ್ ಕ್ರಾಸ್ ದಿಂದ ಪ್ರವೇಶಿಸಿ ರಾಯರಪೇಟೆ ಮಾರ್ಗವಾಗಿ ಅರ್ಬನ್ ಬ್ಯಾಂಕ್ ಕ್ರಾಸಿನಿಂದ ವೀರಭದ್ರಗಲ್ಲಿ ಕರ್ಜಗಿ ಕಲ್ಯಾಣ ಮಂಟಪ ಮಾರ್ಗವಾಗಿ ಶಂಕರ ಹೊಂಡಾ ಮಾರ್ಗವಾಗಿ ವಿಜಯನಗರ ಮಿಸ್ತಾರ ಪ್ಲಾಟ್ ಪಾರ್ಕಿಂಗ್ ಸ್ಥಳದವರೆಗೆ ರಸ್ತೆ ಮಾರ್ಗವನ್ನು ಏಕ ಮುಖ ಸಂಚಾರಿಸಲು ಸೂಚಿಸಲಾಗಿದೆ. ಜಾತ್ರಾ ಪ್ರಯುಕ್ತ ಸಿದ್ದಾಪುರ ಮತ್ತು ಕುಮಟಾ ಕಡೆಯಿಂದ ಬರುವ ಲಘು ವಾಹನಗಳನ್ನು ಪಾರ್ಕಿಂಗ್ ಸ್ಥಳಕ್ಕೆ ಹೋಗಲು ರಸ್ತೆ ಕಿರಿದಾಗಿರುವುದರಿಂದ ಅಗಸೇಬಾಗಿಲ್ ಚರ್ಚ ಕ್ರಾಸ್ದಿಂದ ದೈವಜ್ಞ ಕಲ್ಯಾಣ ಮಂಟಪದ ಕ್ರಾಸ್ ವರೆಗೆ ವಾಹನಗಳನ್ನು ಈ ಮಾರ್ಗವಾಗಿ ಸಂಚರಿಸದೇ ಪಾರ್ಕಿಂಗ್ ಸ್ಥಳದಿಂದ ದೈವಜ್ಞ ಕಲ್ಯಾಣ ಮಂಟಪದ ಮಾರ್ಗವಾಗಿ ಅಗಸೇಬಾಗಿಲ್ ಚರ್ಚ ಕ್ರಾಸ್ದಿಂದ ನಿರ್ಗಮಿಸುವ ವಾಹನಗಳು ಏಕ ಮುಖವಾಗಿ ಸಂಚರಿಸಬೇಕು ಎಂದು ಆದೇಶಿಸಲಾಗಿದೆ.
ಎರಡು ದಿನ ಮದ್ಯ ಮಾರಾಟ ನಿಷೇಧ
ಶಿರಸಿಯ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವದ ಸಮಯದಲ್ಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮ ವಹಿಸುವ ಸಲುವಾಗಿ ಫೆಬ್ರವರಿ 24ರ ರಾತ್ರಿ 10 ಗಂಟೆಯಿAದ ಫೆಬ್ರವರಿ 25ರ ರಾತ್ರಿ 10 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಜೊತೆಗೆ ಮಾರ್ಚ 3ರ ರಾತ್ರಿ 10 ಗಂಟೆಯಿoದ ಮಾ 4ರ ರಾತ್ರಿ 10 ಗಂಟೆಯವರೆಗೆ ಶಿರಸಿ ತಾಲೂಕಿನ ಶಹರ ವ್ಯಾಪ್ತಿಯಲ್ಲಿರುವ ಇರುವ ಎಲ್ಲಾ ರೀತಿಯ ಮದ್ಯ ಮಾರಾಟ ಮತ್ತು ಮದ್ಯ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಆದೇಶಿಸಿದ್ದಾರೆ.