ಶಿರಸಿ-ಹಾವೇರಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ದನಗನಹಳ್ಳಿ ಸಮೀಪ ರಸ್ತೆ ಅಡ್ಡವಾಗಿ ತೆಗೆದಿರುವ ಕಾಲುವೆಗೆ ಬೈಕ್ ಸವಾರೊಬ್ಬರು ಬಿದ್ದಿದ್ದಾರೆ.
ಬೈಕು ಕಾಲುವೆಗೆ ಬಿದ್ದಿದ್ದರಿಂದ ಬೋರನಗುಡ್ಡ ಗ್ರಾಮದ ವ್ಯಕ್ತಿಯೊಬ್ಬರಿಗೆ ಪೆಟ್ಟಾಗಿದೆ. ಬೈಕು ಕಾಲುವೆಯಲ್ಲಿ ಸಿಲುಕಿ ಬಿದ್ದಿದೆ. ರಸ್ತೆ ದುರಸ್ಥಿ ಕಾರ್ಯಕ್ಕೆ ಅನುಗುಣವಾಗಿ ಮುನ್ನಚ್ಚರಿಕೆವಹಿಸದ ಕಾರಣ ಇಲ್ಲಿ ಬೈಕ್ ಸವಾರರು ನಿತ್ಯ ಅಪಾಯ ಎದುರಿಸುತ್ತಿದ್ದಾರೆ. ರಸ್ತೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಸೂಚನಾ ಫಲಕ, ಬ್ಯಾರಿಕೇಡ್ ಇಲ್ಲದ ಬಗ್ಗೆ ಜನ ಆಕ್ರೋಶಹೊರಹಾಕಿದ್ದಾರೆ.
ಈ ರಸ್ತೆ ಮಾರ್ಗವಾಗಿ ದೂಳಿನ ಪ್ರಮಾಣ ಹೆಚ್ಚಾಗಿದ್ದು, ನಿಯಮಿತವಾಗಿ ನೀರು ಸಿಂಪಡಿಸುವ ಕ್ರಮ ಆಗಿಲ್ಲ. ಬಸ್ ಪ್ರಯಾಣಿಕರು ಸಹ ಧೂಳಿನ ತೊಂದರೆಯಿAದ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಾರ್ಗದಲ್ಲಿ ಸೂಚನಾ ಫಲಕಗಳ ಕೊರತೆಯಿಂದಾಗಿ ಪ್ರತಿನಿತ್ಯ ಒಂದಿಲ್ಲೊAದು ಅಪಘಾತ ನಡೆಯುತ್ತಿದೆ.
ಫೆಬ್ರವರಿ 24ರಿಂದ ಶಿರಸಿ ಜಾತ್ರೆ ಆರಂಭವಾಗಲಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.