ದುಡಿಯುವ ವರ್ಗದ ಜನರಿಗೆ ಹೊಸ ದಿಕ್ಕು ತೋರಿಸಿದ ಕಾರ್ಲ್ ಮಾರ್ಕ್ಸ್ ಮತ್ತು ಫೆಡರಿಕ್ ಎಂಗೆಲ್ಸ್ ರಚಿಸಿದ `ಕಮ್ಯುನಿಸ್ಟ್ ಪ್ರಣಾಳಿಕೆ’ ಬಿಡುಗಡೆಯಾದ ದಿನದ ಅಂಗವಾಗಿ ವಿಶ್ವದ ಹಲವು ಕಡೆ ಕೆಂಪು ಪುಸ್ತಕ ದಿನದ ಆಚರಣೆ ನಡೆದಿದೆ. ಅಂಕೋಲಾದಲ್ಲಿಯೂ ಈ ದಿನ `ಯು ಎಸ್ ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು’ ಎಂಬ ಪುಸ್ತಕದ ಬಿಡುಗಡೆ ನಡೆದಿದೆ.
ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನ ಗಾಂಧಿ ಪ್ರತಿಮೆ ಎದುರು ಸಮಾನ ಮನಸ್ಕರು ಸೇರಿ ದುಡಿಯುವ ವರ್ಗದ ಶ್ರಮವನ್ನು ಸ್ಮರಿಸಿದರು. `1848 ಫೆಬ್ರವರಿ 21ರಂದು ಕಾರ್ಲ್ ಮಾರ್ಕ್ಸ್ ಮತ್ತು ಫೆಡರಿಕ್ ಎಂಗೆಲ್ಸ್ ರಚಿಸಿದ ಕಮ್ಯುನಿಸ್ಟ್ ಪ್ರಣಾಳಿಕೆ ಬಿಡುಗಡೆಯಾಗಿದ್ದು, ಆ ಪ್ರಣಾಳಿಕೆ ಜಗತ್ತಿನ ದುಡಿಯುವ ವರ್ಗಕ್ಕೆ ಹೊಸ ದಿಕ್ಕು ತೋರಿಸಿದೆ’ ಎಂದು ಅವರೆಲ್ಲರೂ ಅಭಿಪ್ರಾಯವ್ಯಕ್ತಪಡಿಸಿದರು.
`ಸಾಮ್ರಾಜ್ಯಶಾಹಿ ಅಮೆರಿಕ ವೆನೆಜುವೆಲಾ ಅಧ್ಯಕ್ಷರ ಮತ್ತು ಅವರ ಪತ್ನಿಯ ಅಪಹರಣ ಮಾಡಿರುವುದು, ಇರಾನ ಮೇಲೆ ದಾಳಿ, ಸಿರಿಯಾ, ಲೆಬನಾನ್, ಯೆಮನ್ ಮೇಲೆ ದಾಳಿ, ಇಸ್ರೇಲ್ ನಿಂದ ಪ್ಯಾಲಿಸ್ಟೈನ್ ಮೇಲೆ ದಾಳಿ 70 ಸಾವಿರ ಜನರ ಕೊಲೆ ನಡೆದಿದೆ. ಸುಡಾನ್, ನೈಜೀರಿಯಾ ಮೇಲೆ ಕುಂಟು ನೆಪ ಹೇಳಿ ವೈಮಾನಿಕ ದಾಳಿ, ಕ್ಯೂಬಾ, ಮೆಕ್ಸಿಕೊ ಮೇಲೆ ಯುದ್ಧ ಬೆದರಿಕೆ ಒಡ್ಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವದಲ್ಲಿ ಸಾಮ್ರಾಜ್ಯಶಾಹಿ ವಿರೋಧಿಸಿ ಅಭಿಯಾನ ತೀವ್ರವಾಗಿ ನಡೆಯಬೇಕು’ ಎಂದು ಸಭೆಯಲ್ಲಿ ಮಾತನಾಡಿದ ಗಣ್ಯರು ಅನಿಸಿಕೆವ್ಯಕ್ತಪಡಿಸಿದರು.
ಹಿರಿಯರಾದ ಆರ್ ಜಿ ಗುಂದಿ, ಕೃಷ್ಣ ನಾಯಕ ಹಿಚ್ಕಡ, ಸಿದ್ದಲಿಂಗಸ್ವಾಮಿ ವಸ್ತ್ರದ ಸಭೆಯಲ್ಲಿ ಮಾತನಾಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ, ಪ್ರಮುಖರಾದ ಗೌರೀಶ ನಾಯಕ, ಸಂತೋಷ ನಾಯ್ಕ, ಉದಯ ನಾಯ್ಕ ಹೊಸಗದ್ದೆ, ವಿನೋದ ನಾಯಕ ಸಣ್ಣ ಅಲಗೇರಿ ಮುಂತಾದವರು ಹಾಜರಿದ್ದರು.