ಹೆದ್ದಾರಿ ಅಂಚಿನಲ್ಲಿ ಅನುಮಾನಾಸ್ಪದ ಚೀಲ ಬಿದ್ದಿದ್ದು, ಅದನ್ನು ಪರಿಶೀಲಿಸಿದವರಿಗೆ ದನದ ಚರ್ಮ ಹಾಗೂ ಮೂಳೆಗಳು ಕಾಣಿಸಿವೆ. ಗೋಹತ್ಯೆ ಮಾಡಿದ ಕಟುಕರು ಮಾಂಸಪಡೆದಿದ್ದು, ಅದಾದ ನಂತರ ಮೂಳೆ ಹಾಗೂ ಚರ್ಮವನ್ನು ಹೆದ್ದಾರಿ ಅಂಚಿನಲ್ಲಿ ಎಸೆದು ಪರಾರಿಯಾಗಿದ್ದಾರೆ.
ಹೊನ್ನಾವರದ ಮಂಕಿ ಬಳಿ ಹಾದು ಹೋದ ರಾಷ್ಟಿçÃಯ ಹೆದ್ದಾರಿ 66ರ ಅಂಚಿನಲ್ಲಿ ಚೀಲ ಕಾಣಿಸಿದೆ. ಆ ಚೀಲದ ಒಳಗೆ ಜಾನುವಾರು ಹತ್ಯೆ ಮಾಡಿದ ಸಾಕ್ಷಿಗಳಿವೆ. ಮಾರ್ಚ 9ರ ನಂತರ ಗೋಹತ್ಯೆ ನಡೆದ ಸಾಧ್ಯತೆ ಹೆಚ್ಚಾಗಿದೆ. ಮಾರ್ಚ 11ರಂದು ಸಂಜೆ 4.30ಕ್ಕೆ ಇಲ್ಲಿ ಪ್ಲಾಸ್ಟಿಕ್ ಚೀಲ ಕಾಣಿಸಿದೆ. ಮಂಕಿ ಪೊಲೀಸ್ ಠಾಣೆಯ ಪಿಸೈ ಅಭಿನಂದನ್ ಎಂ ಎಸ್ ಅವರು ಚೀಕ ತೆರೆದು ನೋಡಿದ್ದಾರೆ. ಆಗ ಅವರಿಗೆ ಅದರಲ್ಲಿ ಜಾನುವಾರುವಿನ ತಲೆ, ಎಲುಬು, ಹಾಗೂ ಚರ್ಮ ಕಾಣಿಸಿದ್ದು ಕಟುಕರ ಕೃತ್ಯವನ್ನು ಅವರು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಅದಾದ ನಂತರ ಪೊಲೀಸ್ ಠಾಣೆಗೆ ಹೋದ ಅವರು ವಿವಿಧ ಆಯಾಮಗಳಲ್ಲಿ ಕಟುಕರ ಹುಡುಕಾಟ ನಡೆಸಿದ್ದಾರೆ. ಅವರ ಪತ್ತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾನೂನು ಕ್ರಮ ಜರುಗಿಸಿದ್ದು, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಪ್ರಕಾರ ಪ್ರಕರಣವನ್ನು ದಾಖಲಿಸಿದ್ದಾರೆ.