ಐದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಸುವನ್ನು ಯಲ್ಲಾಪುರ ಯುಗಾದಿ ಉತ್ಸವ ಸಮಿತಿ ಉಪಾಧ್ಯಕ್ಷ ಮಹೇಶ ನಾಯ್ಕ ಹಾಗೂ ಅವರ ಜೊತೆಗಾರರು ಸೇರಿ ರಕ್ಷಿಸಿದ್ದಾರೆ. ವೈಟಿಎಸ್‌ಎಸ್ ಮೈದಾನದ ಬಳಿ ನರಳಾಡುತ್ತಿದ್ದ ಹಸುವಿಗೆ ಈ ಬಳಗದವರು ಮರುಜೀವ ನೀಡಿದ್ದಾರೆ.
ಆಘಾತಕ್ಕೆ ಒಳಗಾದ ಹಸು ತೀವೃ ಪ್ರಮಾಣದಲ್ಲಿ ಅಸ್ವಸ್ಥರಾಗಿರುವುದನ್ನು ಸ್ಥಳೀಯರು ಗಮನಿಸಿದರು. ನಂತರ ಅವರು ಮಹೇಶ ನಾಯ್ಕ ಅವರಿಗೆ ಫೋನ್ ಮಾಡಿದ್ದು, ಅವರು ಸ್ಥಳಕ್ಕೆ ಆಗಮಿಸಿದರು. ಹಸು ಅಸ್ವಸ್ಥವಾಗಿರುವ ಬಗ್ಗೆ ಪಶು ಇಲಾಖೆಗೆ ಮಾಹಿತಿ ನೀಡಿ ಔಷಧಿಯನ್ನು ತರಿಸಿದರು. ಹಸು ಕ್ರಮೇಣ ಚೇತರಿಸಿಕೊಂಡಿದ್ದು, ವಾಹನವೊಂದರ ಮೂಲಕ ಅದನ್ನು ಪಶು ಇಲಾಖೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು.
ಹಸುವಿನ ಮೈಮೇಲೆ ಸಾಕಷ್ಟು ಪ್ರಮಾಣದಲ್ಲಿ ಹುಳ ಬಿದ್ದಿದ್ದು, ಅದನ್ನು ವೈದ್ಯರು ಸ್ವಚ್ಛಗೊಳಿಸಿದರು. ಕೃಷ್ಣ ಬೋವಿವಡ್ಡರ್, ಮಹೇಶ ಬೋವಿವಡ್ಡರ್, ಷ್ಣುಖ ನಾಯ್ಕ, ವಾಹನ ಚಾಲಕ ರಾಜು ಕೊಪ್ಪದ, ವಾಟರ್ ಮ್ಯಾನ್ ಸುರೇಶ ಅವರ ಜೊತೆ ಸಾಗರ ನಾಯ್ಕ, ಅರುಣ, ಶಂಕರ್ ಬೋವಿವಡ್ಡರ್ ಅವರು ಈ ಕಾರ್ಯಕ್ಕೆ ಕೈ ಜೋಡಿಸಿದರು. ಸದ್ಯ ಆ ಹಸುವನ್ನು ಪಶು ಇಲಾಖೆಯ ಸುಪರ್ಧೀಗೆ ನೀಡಲಾಗಿದ್ದು, ಅಲ್ಲಿ ಚೇತರಿಸಿಕೊಳ್ಳುತ್ತಿದೆ.