ಶಿರಸಿ ಜಾತ್ರೆಗೆ ಬಂದಿದ್ದ ಗುರುದತ್ತ ಶೇಟ್ ಅವರ ಬೈಕಿಗೆ ದಿನೇಶ ಭಟ್ಟ ಅವರು ಬೈಕ್ ಗುದ್ದಿದ್ದು, ಗಂಭೀರ ಗಾಯಗೊಂಡಿದ್ದ ದಿನೇಶ ಭಟ್ಟ ಅವರು ಸಾವನಪ್ಪಿದ್ದಾರೆ. ಮಾರ್ಚ 3ರ ರಾತ್ರಿ ಈ ಅಪಘಾತ ನಡೆದಿದ್ದು, ಮಾರ್ಚ 11ರಂದು ದಿನೇಶ ಭಟ್ಟ ಅವರ ಬದುಕು ಅಂತ್ಯವಾಗಿದೆ.
Advertisement. Scroll to continue reading.
ಸಿದ್ದಾಪುರ ಕಾನಸೂರಿನ ಗುರುದತ್ತ ಗಂಗಾಧರ ಶೇಟ್ (66) ಅವರು ಮಾರ್ಚ 3ರಂದು ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆಗೆ ಬಂದಿದ್ದರು. ಜಾತ್ರೆ ಮುಗಿಸಿದ ಅವರು ತಮ್ಮ ಸ್ನೇಹಿತರಾದ ಕಾನಸೂರಿನ ನಿವೃತ್ತ ನಿವೃತ್ತ ಬ್ಯಾಂಕ್ ನೌಕರ ಸುಬ್ರಾಯ ವಾಮನ ಶೇಟ್ ಅವರ ಜೊತೆ ಮನೆಗೆ ಮರಳುತ್ತಿದ್ದರು. ಆ ದಿನ ರಾತ್ರಿ 10.30ಕ್ಕೆ ಅವರು ಯಡಳ್ಳಿ ಬಳಿ ತಲುಪಿದ್ದು, ಹಿಂದಿನಿAದ ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ನಿವೃತ್ತ ಸರ್ಕಾರಿ ನೌಕರ ದಿನೇಶ ಗಣಪತಿ ಭಟ್ಟ ಅವರು ಗುರುದತ್ತ ಶೇಟ್ ಅವರ ಬೈಕಿಗೆ ಡಿಕ್ಕಿ ಹೊಡೆದರು.
ಆ ಡಿಕ್ಕಿ ರಭಸಕ್ಕೆ ಎರಡೂ ಬೈಕಿನಲ್ಲಿದ್ದವರು ನೆಲಕ್ಕೆ ಬಿದ್ದರು. ಎರಡು ಬೈಕು ಜಖಂ ಆಗಿದ್ದು, ಎಲ್ಲರೂ ಗಾಯಗೊಂಡರು. ಆ ಪೈಕಿ ದಿನೇಶ ಭಟ್ಟ ಅವರು ಗಂಭೀರ ಪ್ರಮಾಣದಲ್ಲಿ ನೋವು ಅನುಭವಿಸಿದರು. ಅವರ ತಲೆಗೂ ಗಾಯವಾಗಿದ್ದು, ಆಸ್ಪತ್ರೆ ಸೇರಿದರು. ದಿನೇಶ ಭಟ್ಟ ಅವರನ್ನು ಹುಬ್ಬಳ್ಳಿಯ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಅಲ್ಲಿನ ಚಿಕಿತ್ಸೆಗೂ ಸ್ಪಂದಿಸಲಿಲ್ಲ. ಈ ದಿನ ಅವರು ಅಲ್ಲಿಯೇ ಕೊನೆಯುಸಿರೆಳೆದರು.
ಅಪಘಾತದಲ್ಲಿ ಗುರುದತ್ತ ಶೇಟ್ ಅವರ ಬೈಕಿನಲ್ಲಿದ್ದ ಸುಬ್ರಾಯ ಶೇಟ್ ಅವರ ತಲೆಗೂ ಭಾರೀ ಪ್ರಮಾಣದಲ್ಲಿ ಪೆಟ್ಟಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.