ಮನೆಯಲ್ಲಿ ಮಲಗಿದ್ದ ಸೀತಾಬಾಯಿ ಹರಿಕಂತ್ರ ಅವರು ತಡರಾತ್ರಿ ಎದ್ದು ಸ್ಮಶಾನಕ್ಕೆ ಹೋಗಿದ್ದಾರೆ. ಮರುದಿನ ಬೆಳಗ್ಗೆ ಅಲ್ಲಿಯೇ ಅವರ ಶವ ಸಿಕ್ಕಿದೆ!
ಅಂಕೋಲಾದ ಕೇಣಿ ಗಾಭೀತವಾಡದಲ್ಲಿ ಸೀತಾಬಾಯಿ ಹರಿಕಂತ್ರ ಅವರು ವಾಸವಾಗಿದ್ದರು. 67 ವರ್ಷದ ಅವರು ಮೀನುಗಾರಿಕೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಮಾರ್ಚ 10ರಂದು ರಾತ್ರಿ ಅವರು ತಮ್ಮ ಮನೆಯಲ್ಲಿ ಮಲಗಿದ್ದರು. ನಸುಕಿನ 3 ಗಂಟೆ ಆಸುಪಾಸಿನಲ್ಲಿ ಎದ್ದ ಅವರು ಒಂಟಿಯಾಗಿ ಗಾಭೀತವಾಡದ ಸ್ಮಶಾನದ ಕಡೆ ಹೆಜ್ಜೆ ಹಾಕಿದರು. ಅವರು ಎಲ್ಲಿ ಏಕೆ ಹೋದರು? ಎಂಬುದು ಯಾರಿಗೂ ಗೊತ್ತಾಗಲಿಲ್ಲ.
ಮಾರ್ಚ 11ರಂದು ಅವರು ಅಲ್ಲಿಯೇ ಶವವಾಗಿದ್ದರು. ಸೀತಾಬಾಯಿ ಹರಿಕಂತ್ರ ಅವರಿಗೆ ಸರಿಯಾಗಿ ಕಣ್ಣು ಕಾಣುತ್ತಿರಲಿಲ್ಲ. ಹೀಗಾಗಿ ಗುಡ್ಡದಿಂದ ಕೆಳಗಿಳಿದು ಬರಲು ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಅವರು ಅಲ್ಲಿಯೇ ಅಸ್ವಸ್ಥರಾಗಿ ಸಾವನಪ್ಪಿದ ಬಗ್ಗೆ ಅಂದಾಜಿಸಲಾಗಿದೆ. ಸ್ಮಶಾನದ ಬಳಿ ತಾಯಿ ಶವ ನೋಡಿದ ಸುಧಾಕರ ಹರಿಕಂತ್ರ ಅವರು ಈ ಬಗ್ಗೆ ಅಂಕೋಲಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.