ಭಟ್ಕಳದ ಮಾವಿನಕುರ್ವೆಯ ಕರಿಕಲ್ ಗ್ರಾಮದಲ್ಲಿ ನಾಲ್ಕು ಜನರ ಗುಂಪೊoದು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದೆ. ಕರಿಕಲ್ ಗ್ರಾಮದ ಶಿವಾನಂದ ಮೊಗೇರ ಅವರು ಈ ದಾಳಿಯಿಂದ ತತ್ತರಿಸಿದ್ದಾರೆ.
ಅದೇ ಊರಿನವರಾದ ನಾಗರಾಜ ಮಂಜುನಾಥ ಮೊಗೇರ, ಆನಂದ ರಾಮ ಮೊಗೇರ, ವಸಂತ ಶಂಕರ ಮೊಗೇರ ಮತ್ತು ಲಕ್ಷ್ಮೀಶ ಶ್ರೀಧರ ಮೊಗೇರ ಅವರು ಶಿವಾನಂದ ಮೊಗೇರ್ ಅವರ ಮೇಲೆ ಆಕ್ರಮಣ ಮಾಡಿದ್ದಾರೆ. ಈ ಬಗ್ಗೆ ನ್ಯಾಯ ಕೋರಿ ಶಿವಾನಂದ ಮೊಗೇರ್ ಅವರ ಪತ್ನಿ ರಶ್ಮಿ ಮೊಗೇರ್ ಅವರು ಪೊಲೀಸರ ಮೊರೆ ಹೋಗಿದ್ದಾರೆ.
ಫೆಬ್ರವರಿ 27ರ ರಾತ್ರಿ 8 ಗಂಟೆಗೆ ಈ ದಾಳಿ ನಡೆದಿದೆ. ಶಿವಾನಂದ ಮೊಗೇರ ಅವರು ಮನೆಯಲ್ಲಿರುವಾಗಲೇ ಬಂದ ಆಗಂತುಕರು ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿದ ಶಿವಾನಂದ ಮೊಗೇರ ಅವರ ಪತ್ನಿ ರಶ್ಮಿ ಅವರನ್ನು ಆರೋಪಿತರು ದೂಡಿ ಹಾಕಿದ್ದಾರೆ. ಹೊರಗಡೆ ಎಲ್ಲಾದರೂ ಸಿಕ್ಕರೆ ಮತ್ತೆ ಹೊಡೆಯುತ್ತೇವೆ ಎಂದು ಸಹ ಅವರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ರಶ್ಮಿ ಅವರು ನ್ಯಾಯಾಲಯದ ಮೊರೆ ಹೋಗಿ, ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.