ಹೊನ್ನಾವರ ಪಟ್ಟಣದಲ್ಲಿರುವ ಯುಕೆ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಗೆ ಬೆಂಕಿ ಬಿದ್ದಿದೆ. ಬ್ಯಾಂಕಿನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ವಯರ್ ಶಾರ್ಟ ಸರ್ಕೀಟ್ ಆಗಿದ್ದೇ ಅಗ್ನಿ ಅವಘಡಕ್ಕೆ ಕಾರಣವಾಗಿದೆ.
ಇಲ್ಲಿನ ಜೇನು ಸೊಸೈಟಿ ಮೇಲ್ಬಾಗದ ಕಟ್ಟಡದಲ್ಲಿ ಯುಕೆ ಬ್ಯಾಂಕ್ ಕಚೇರಿ ಇತ್ತು. ಭಾನುವಾರ ಮಧ್ಯಾಹ್ನ ಬ್ಯಾಂಕಿನ ಕಚೇರಿಯಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಸಮೀಪ ಹೋಗಿ ನೋಡಿದಾಗ ಬೆಂಕಿ ಬಿದ್ದಿರುವುದು ಗೊತ್ತಾಗಿದೆ. ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಹಾನಿಗೆ ಒಳಗಾಗಿದೆ.
ಬೆಂಕಿ ವೇಗವಾಗಿ ವ್ಯಾಪಿಸಿದ ಪರಿಣಾಮ ಬ್ಯಾಂಕಿನಲ್ಲಿದ್ದ ಕಂಪ್ಯೂಟರ್ ಸುಟ್ಟು ಕರಕಲಾಗಿದೆ. ದಾಖಲೆಗಳನ್ನು ಸಂಗ್ರಹಿಸುವ ಚೆಂಬರ್ ಬಳಿಯೂ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿದ್ದ ಖುರ್ಚಿ ಸೇರಿ ವಿವಿಧ ವಸ್ತುಗಳು ಬೂದಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸಿದ್ದಾರೆ. ಆ ಮೂಲಕ ಭಾರೀ ಪ್ರಮಾಣದ ಅನಾಹುತವನ್ನು ತಪ್ಪಿಸಿದ್ದಾರೆ.