ಅಂಕೋಲಾದ ಹಾರವಾಡದ ಬಳಿ ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿ ನಡೆದಿದ್ದು, ಈ ದುರಂತದಲ್ಲಿ ಅದೇ ಭಾಗದ ಸಚಿನ ಹರಿಕಂತ್ರ ಅವರು ಸಾವನಪ್ಪಿದ್ದಾರೆ. ಅಪಘಾತಕ್ಕೆ ಕಾರಣನಾದ ಅಪರಿಚಿತ ಬೈಕ್ ಸವಾರ ಪಲ್ಸರ್ ಬೈಕ್ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ಆ ಅಪರಿಚಿತನ ಶೋಧ ಶುರುವಾಗಿದೆ.
ಸಚಿನ ಬುದ್ದು ಹರಿಕಂತ್ರ (30) ಅವರು ಹಾರವಾಡ ತರಂಗಮೇಟುವಿನ ಬಳಿ ವಾಸವಾಗಿದ್ದರು. ಮೀನುಗಾರಿಕೆ ಮಾಡಿಕೊಂಡು ಅವರು ಬದುಕು ನಡೆಸುತ್ತಿದ್ದರು. ಮಾರ್ಚ 28ರ ರಾತ್ರಿ ಅವರು ಮನೆಯಿಂದ ಹೊರಬಿದ್ದಿದ್ದು, ಬೈಕ್ ಚಾಲು ಮಾಡಿದ್ದರು. ಹಾರವಾಡದಿಂದ ಅವರ್ಸಾ ಕಡೆ ಹೋರಟಿದ್ದ ಪಲ್ಸರ್ ಬೈಕು ಸಚೀನ್ ಹರಿಕಂತ್ರ ಅವರ ಬೈಕಿಗೆ ಮೂಡೆಕಟ್ಟಾ ಕ್ರಾಸಿನ ಬಳಿ ಗುದ್ದಿತು.
ಆ ಬೈಕ್ ಗುದ್ದಿದ ರಭಸಕ್ಕೆ ಸಚಿನ ಹರಿಕಂತ್ರ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಎದೆ, ಕೈ-ಕಾಲುಗಳಿಗೆ ಗಾಯವಾಗಿದ್ದ ಅವರನ್ನು ಅಂಕೋಲಾದ ಆರ್ಯ ಮೆಡಿಕಲ್’ಗೆ ದಾಖಲಿಸಲಾಯಿತು. ಅಪಘಾತ ಗಮನಿಸಿದ ಪಲ್ಸರ್ ಬೈಕ್ ಸವಾರ ತಮ್ಮ ಬೈಕನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು. ಸಾಕಷ್ಟು ಚಿಕಿತ್ಸೆ ನೀಡಿದರೂ ಸಚಿನ್ ಹರಿಕಂತ್ರ ಅವರು ಬದುಕಲಿಲ್ಲ. ಅದೇ ದಿನ ರಾತ್ರಿ ಅವರು ಕೊನೆಯುಸಿರೆಳೆದರು.
ಈ ಅಪಘಾತದ ಬಗ್ಗೆ ಹಾರವಾಡದ ಮೀನು ವ್ಯಾಪಾರಿ ಮಂಗಲಾ ಪಾಂಡುರAಗ ಹರಿಕಂತ್ರ ಅವರು ಮಾಹಿತಿ ನೀಡಿದರು. ಆ ಮಾಹಿತಿ ಆಧರಿಸಿ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದರು. ಸದ್ಯ ಅಪಘಾತಕ್ಕೆ ಕಾರಣನಾದ ಪಲ್ಸರ್ ಬೈಕ್ ಚಾಲಕನ ಶೋಧ ಶುರುವಾಗಿದೆ.