• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sharavati struggle under the leadership of the saints!

ಶ್ರೀಗಳ ಸಾರಥ್ಯದಲ್ಲಿ ಶರಾವತಿ ಹೋರಾಟ!

March 3, 2026
Stray dogs' taunts Puthani cow is in trouble!

ಬೀದಿ ನಾಯಿಗಳ ಅಟ್ಟಹಾಸ: ಪುಠಾಣಿ ಗೋವು ಅಸ್ತಗಂತ!

March 3, 2026
Fighter's family fears for their lives Police appeal for protection

ಹೋರಾಟಗಾರನ ಕುಟುಂಬಕ್ಕೆ ಜೀವಭಯ: ರಕ್ಷಣೆಗಾಗಿ ಪೊಲೀಸ್ ಮೊರೆ

March 3, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sharavati struggle under the leadership of the saints!

ಶ್ರೀಗಳ ಸಾರಥ್ಯದಲ್ಲಿ ಶರಾವತಿ ಹೋರಾಟ!

March 3, 2026
Stray dogs' taunts Puthani cow is in trouble!

ಬೀದಿ ನಾಯಿಗಳ ಅಟ್ಟಹಾಸ: ಪುಠಾಣಿ ಗೋವು ಅಸ್ತಗಂತ!

March 3, 2026
Fighter's family fears for their lives Police appeal for protection

ಹೋರಾಟಗಾರನ ಕುಟುಂಬಕ್ಕೆ ಜೀವಭಯ: ರಕ್ಷಣೆಗಾಗಿ ಪೊಲೀಸ್ ಮೊರೆ

March 3, 2026
ADVERTISEMENT
  • Home
  • Janamata
Tuesday, March 3, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕ್ಷತ್ರಿಯ ಕೊಂಕಣ ಮರಾಠಾ ಪ್ರೀಮಿಯರ್ ಲೀಗ್: ಮರಾಠಾ ವಾರಿಯರ್ಸ್ ಚಾಂಪಿಯನ್

Achyutkumar by Achyutkumar
March 3, 2026
Kshatriya Konkan Maratha Premier League Maratha Warriors are champions
254
VIEWS
Share on FacebookShare on WhatsappShare on Twitter
ADVERTISEMENT

ಸಮಾಜ ಸೇವೆಯ ಜೊತೆ ಶಿಕ್ಷಣ ಕ್ಷೇತ್ರದಲ್ಲಿಯೂ ತೊಟಗಿರುವ ಅಮದಳ್ಳಿ ಮೂಲದ ಉದ್ಯಮಿ ಪ್ರಸಾದ್ ಗಾಂವಕರ ಅವರು ಕ್ರೀಡಾ ಕ್ಷೇತ್ರದಲ್ಲಿಯೂ ಚಾಪು ಮೂಡಿಸಿದ್ದಾರೆ. ಸದ್ಯ ಬೈತಕೊಲ್ ಟ್ರಾಫಿಕಾನಾ ಟರ್ಮಿನಲ್ ಮ್ಯಾನೇಜರ್ ಆಗಿರುವ ಪ್ರಸಾದ್ ಗಾಂವಕರ ಅವರ ಮಾಲಕತ್ವದ ಮರಾಠಾ ವಾರಿಯರ್ಸ್ ತಂಡವೂ `ಕ್ಷತ್ರಿಯ ಕೊಂಕಣ ಮರಾಠಾ ಪ್ರೀಮಿಯರ್ ಲೀಗ್ – 2026′ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ADVERTISEMENT

ನಿರಾಕಾರ ಯೂತ್ ಕ್ಲಬ್ ಮಖೇರಿ ಹಾಗೂ ಮಲ್ಲಿಕಾರ್ಜುನ ಕ್ರಿಕೆಟರ್ಸ್ ಕಾರವಾರ ಅವರ ಆಯೋಜಕತ್ವದಲ್ಲಿ ಫೆಬ್ರವರಿ 28 ಹಾಗೂ ಮಾರ್ಚ್ 1ರಂದು ನಡೆದ ಕ್ರೀಡಾಕೂಟದಲ್ಲಿ ಮರಾಠಾ ವಾರಿಯರ್ಸ್ ತಂಡದವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರ ಈ ಸಾಹಸಕ್ಕೆ 1 ಲಕ್ಷ ರೂ ಬಹುಮಾನದ ಜೊತೆ ಪಾರಿತೋಷಕದ ಗೆಲುವು ಸಿಕ್ಕಿದೆ. ಲೀಗ್ ಹಂತದಲ್ಲಿ ನಡೆದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದು ಟೇಬಲ್ ಟಾಪರ್ ಆಗಿ ಹೊರಹೊಮ್ಮಿದ ಮರಾಠಾ ವಾರಿಯರ್ಸ್ ತಂಡವು ಕ್ವಾಲಿಫೈಯರ್ 1ರಲ್ಲಿ ಸೋಲು ಕಂಡರೂ ಹಿಂತಿರುಗದೆ ಕ್ವಾಲಿಫೈಯರ್ 2ರಲ್ಲಿ ಗೆದ್ದು ಫೈನಲ್ ಪ್ರವೇಶಿಸಿತು.

ADVERTISEMENT

ಫೈನಲ್‌ನಲ್ಲಿ ವೀರ ಮರಾಠಾ ಬಾಳ್ನಿ ವಿರುದ್ಧ 5 ಓವರ್‌ಗಳ ರೋಚಕ ಪಂದ್ಯ ನಡೆಯಿತು. ಟಾಸ್ ಗೆದ್ದ ಮರಾಠಾ ವಾರಿಯರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ತಂಡ 61 ರನ್‌ಗಳ ಗುರಿ ನೀಡಿತು. ಕೊನೆಯ ಓವರ್ ತನಕ ನಡೆದ ತೀವ್ರ ಪೈಪೋಟಿಯಲ್ಲಿ ಗುರಿ ಬೆನ್ನಟ್ಟಿದ ಮರಾಠಾ ವಾರಿಯರ್ಸ್ ಜಯ ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರನ್ನರ್-ಅಪ್ ಸ್ಥಾನವನ್ನು ವೀರ ಮರಾಠಾ ಬಾಳ್ನಿ ಪಡೆದುಕೊಂಡಿತು. ತಂಡದ ಮಾಲೀಕರಾದ ಪ್ರಸಾದ್ ಗಾಂವಕರ (ಅಮದಳ್ಳಿ) ಹಾಗೂ ಕೋ-ಓನರ್ ಪ್ರಸಾದ್ ನಾಯ್ಕ (ಹಣಕೋಣ್) ಅವರು ಅಮದಳ್ಳಿಯ ಸುಧೀಪ್ ಸತೀಶ್ ಗಾವಂಕರ್ ಅವರನ್ನು ತಂಡದ ನಾಯಕನಾಗಿ ನೇಮಕ ಮಾಡಿದ್ದರು. ಇದು ಅವರು ಮರಾಠಾ ವಾರಿಯರ್ಸ್ ತಂಡದ ನಾಯಕತ್ವ ವಹಿಸಿದ ಮೂರನೇ ಬಾರಿ. ಈ ಮೂರೂ ಅವಧಿಗಳಲ್ಲಿ ಮೊದಲ ಬಾರಿಗೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ADVERTISEMENT

ಪ್ರಣಾಭ್ ರಾಣೆ ಅವರು ಮ್ಯಾನ್ ಆಫ್ ದ ಸಿರೀಸ್, ಮಂದಾರ ನಾಯಕ್ ಅವರು ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದ ಮ್ಯಾಚ್ (ಸಿಡಿಲು ಇನ್ನಿಂಗ್ಸ್) ಆಗಿ ವಿಶೇಷ ಸಾಧನೆ ಮಾಡಿದರು. ಈ ಇಬ್ಬರು ಆಟಗಾರರೂ ಮರಾಠಾ ವಾರಿಯರ್ಸ್ ತಂಡದವರೇ ಎಂಬುದು ಇಲ್ಲಿನ ವಿಶೇಷ. ತಂಡದ ಆಟಗಾರರಾದ ಸುಧೀಪ್ ಗಾಂವಕರ, ವೈಭವ್ ಗಾಂವಕರ (ಅಮದಳ್ಳಿ), ಮಂದಾರ ನಾಯಕ್, ಸೋಮೇಶ್ ಗಾಂವಕರ, ಮಹೇಂದ್ರ ಗಾಂವಕರ, ಜಯೇಶ್ ರಾಣೆ, ರೋಷನ್ ದೇಸಾಯಿ, ಗೌತಮ್ ನಾಯ್ಕ (ಮಖೇರಿ), ಪ್ರಣಾಭ್ ರಾಣೆ (ಮುಡಗೇರಿ), ಸಾಯಿ ನಾಯ್ಕ (ನಂದಗದ್ದಾ), ಅಭಯ ನಾಯ್ಕ (ಸದಾಶಿವಗಡ), ಕಿರಣ್ ನಾಯ್ಕ (ಹಣಕೋಣ್) ಸೇರಿದಂತೆ ತಂಡವು ಒಗ್ಗಟ್ಟಿನ ಆಟ ಪ್ರದರ್ಶಿಸಿದರು. ಕಳೆದ ವರ್ಷ ತಂಡದ ಭಾಗವಾಗಿದ್ದ ರೂಪೇಶ್ ದಳವಿಯವರಿಗೆ ಅವರ ಅಮೂಲ್ಯ ಕೊಡುಗೆಗಾಗಿ ಮಾಲೀಕರಾದ ಪ್ರಸಾದ್ ಗಾಂವಕರ ಅವರು ಕೃತಜ್ಞತೆ ಸಲ್ಲಿಸಿದರು.

ಮರಾಠಾ ವಾರಿಯರ್ಸ್ ತಂಡವು ಕಳೆದ ವರ್ಷ ಅವರ್ಸಾ ಪ್ರಿಮಿಯರ್ ಲೀಗ್ 2025ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ನಿರಂತರ ಜಯಗಳಿಂದ ತಂಡದ ಮಟ್ಟ ಮತ್ತಷ್ಟು ಎತ್ತರಕ್ಕೇರಿದೆ. ಕೊಂಕಣ ಮರಾಠ ಸಮುದಾಯದಲ್ಲಿ ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಪ್ರಸಾದ್ ಗಾಂವಕರ ಅವರು ವಿಶೇಷವಾಗಿ ಗುರುತಿಸಿಕೊಂಡಿದ್ದು, ಅವರು ಕ್ರೀಡಾಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ಶಿಕ್ಷಣ ಪ್ರೇಮಿಯಾಗಿರುವ ಇವರು ಅಂಗನವಾಡಿ ಶಾಲೆಗಳಿಗೆ ಪರಿಕರಗಳ ವಿತರಣೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ, ಆಶಾ ಕಾರ್ಯಕರ್ತೆಯರ ಸನ್ಮಾನ, ಅನಾರೋಗ್ಯದಲ್ಲಿರುವವರಿಗೆ ಆರ್ಥಿಕ ನೆರವು ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಸ್ವತಃ ಕ್ರಿಕೆಟ್ ಆಟಗಾರರಾಗಿರುವ ಅವರು `ಇಂದಿನ ಯುವಜನರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು, ದೈಹಿಕವಾಗಿ ಸದೃಢರಾಗಬೇಕು ಹಾಗೂ ಸಮಾಜ ಸಂಘಟಿತವಾಗಬೇಕು’ ಎಂದು ಕರೆ ನೀಡಿದ್ದಾರೆ.

 

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋