ಯಲ್ಲಾಪುರದ ಹೆದ್ದಾರಿಯಲ್ಲಿ ಸ್ಕೂಟಿ ಸ್ಕಿಡ್ ಆದ ಪರಿಣಾಮ ಆ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಈ ಅಪಘಾತದಲ್ಲಿ ಸ್ಕೂಟಿ ಓಡಿಸುತ್ತಿದ್ದವರಿಗೂ ಗಾಯವಾಗಿದೆ.
ಮಾರ್ಚ 18ರ ರಾತ್ರಿ 10.30ಕ್ಕೆ ಯಲ್ಲಾಪುರ – ಹುಬ್ಬಳ್ಳಿ ಹೆದ್ದಾರಿಯ ಕರಿಯವ್ವನಗುಂಡಿ ಕ್ರಾಸಿನ ಬಳಿ ಈ ಅಪಘಾತ ನಡೆದಿದೆ. ಆ ರಾತ್ರಿ ಹೊಸಳ್ಳಿಯ ರಾಮು ಸುಕ್ರು ಹುಂಬೆ (65) ಅವರು ಹೊಳೆನಂದಿಕಟ್ಟಾದಿAದ ಹೊಸಳ್ಳಿ ಕಡೆ ಸ್ಕೂಟಿ ಓಡಿಸಿಕೊಂಡು ಹೊರಟಿದ್ದರು. ಆ ಸ್ಕೂಟಿಯಲ್ಲಿ ಜನ್ನು ದಾವು ಕೋಳಾಪಟ್ಟೆ (62) ಅವರು ಆಸೀನರಾಗಿದ್ದರು. ರಾತ್ರಿಯಾದ ಕಾರಣ ಬೇಗ ಊರಿಗೆ ತಲುಪಬೇಕು ಎಂಬ ನಿಟ್ಟಿನಲ್ಲಿ ರಾಮು ಹುಂಬೆ ಅವರು ಜೋರಾಗಿ ಸ್ಕೂಟಿ ಓಡಿಸುತ್ತಿದ್ದರು. ಆ ಸ್ಕೂಟಿ ಕರಿಯವ್ವನಗುಂಡಿ ಕ್ರಾಸಿನ ಬಳಿ ಸ್ಕಿಡ್ ಆಯಿತು.
ಸ್ಕೂಟಿಯಿಂದ ಬಿದ್ದ ರಭಸಕ್ಕೆ ರಾಮು ಹುಂಬೆ ಹಾಗೂ ಜನ್ನು ಕೋಳಾಪಟ್ಟೆ ಅವರು ಗಾಯಗೊಂಡರು. ಆ ಪೈಕಿ ಸ್ಕೂಟಿ ಹಿಂದೆ ಕೂತಿದ್ದ ಜನ್ನು ಕೋಳಾಪಟ್ಟೆ ಅವರ ಮೂಗಿನಿಂದ ರಕ್ತ ಸುರಿಯಲು ಶುರುವಾಯಿತು. ತಲೆಗೂ ಗಂಭೀರ ಪ್ರಮಾಣದಲ್ಲಿ ಗಾಯವಾಗಿದ್ದರಿಂದ ಜನ್ನು ಕೋಳಾಪಟ್ಟೆ ಅವರು ಅಲ್ಲಿಯೇ ಸಾವನಪ್ಪಿದರು. ಸ್ಕೂಟಿಯೂ ಜಖಂ ಆಗಿದ್ದು, ರಾಮು ಹುಂಬೆ ಅವರು ಅಪಘಾತದಲ್ಲಿ ಗಾಯಗೊಂಡರು. ತಂದೆಯ ಸಾವಿನ ಬಗ್ಗೆ ಪರಶುರಾಮ ಕೋಳಾಪಟ್ಟೆ ಅವರು ಮಾಹಿತಿ ನೀಡಿದರು. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ವೇಗವಾಗಿ ಸ್ಕೂಟಿ ಓಡಿಸಿದ ರಾಮು ಹುಂಬೆ ಅವರ ವಿರುದ್ಧ ಕ್ರಮ ಜರುಗಿಸಿದರು.
`ನಿಧಾನವಾಗಿ ವಾಹನ ಓಡಿಸಿ. ಸಂಚಾರಿ ನಿಯಮ ಪಾಲಿಸಿ’