ಬಡ ರೋಗಿಗಳ ಸಂಕಷ್ಟ ಅರಿತ ರೋಟರಿ ಕ್ಲಬ್ ಆಫ್ ಕಾರವಾರ ಪಶ್ಚಿಮ ವಿಭಾಗದವರು ಕಾರವಾರದ ಐಡಿಬಿಐ ಬ್ಯಾಂಕ್ ಸಹಯೋಗದಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ 3 ಲಕ್ಷ ರೂ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಉಪಕರಣಗಳು ಆಸ್ಪತ್ರೆಯ ಸೇವೆಗೆ ಅಗತ್ಯವಾಗಿದ್ದು, ರೋಗಿಗಳಿಗೆ ಅನುಕೂಲ ಮಾಡಿಕೊಟ್ಟಿದೆ.
Advertisement. Scroll to continue reading.
ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ರೋಟರಿ ಕ್ಲಬ್ ಆಫ್ ಕಾರವಾರ ಪಶ್ಚಿಮ ವಿಭಾಗದವರು ವಾಷ್ಪ ಚಿಕಿತ್ಸೆ ಯಂತ್ರವನ್ನು ನೀಡಿದ್ದಾರೆ. ಇದರೊಂದಿಗೆ ಪಂಚಕರ್ಮ ಮಸಾಜ್ ಮಂಚ ಹಾಗೂ ಬಸ್ತಿ ಚಿಕಿತ್ಸಾ ಯಂತ್ರಗಳನ್ನು ಕೊಡಗೆಯಾಗಿ ಕೊಟ್ಟಿದ್ದಾರೆ. ಕ್ಲಬ್ಬಿನ ಅಧ್ಯಕ್ಷ ಅಕ್ಷಯ ಅವರು ಈ ಸಲಕರಣೆಗಳನ್ನು ವಿತರಿಸಿದ್ದು, ಕ್ಲಬ್ಬಿನ ಖಜಾಂಚಿ ರತ್ನಾಕರ, ಕಾರವಾರ ಐಡಿಬಿಐ ಬ್ಯಾಂಕ್ ಕಾರವಾರ ಶಾಖೆಯ ವ್ಯವಸ್ಥಾಪಕ ಪ್ರಸನ್ನ ಭಟ್ ಅವರು ಈ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಅಶೋಕ ನಾಯ್ಕ ಹಾಗೂ ಡಾ ಪ್ರವೀಣ, ಸಂಜೀವ ಅವರು ಭಾಗವಹಿಸಿದ್ದು, ಅವರು ಸಂಸ್ಥೆಯ ಸಾಮಾಜಿಕ ಕಾಳಜಿಯ ಬಗ್ಗೆ ಮೆಚ್ಚುಗೆವ್ಯಕ್ತಪಡಿಸಿದರು. ಕಾರ್ಯಕ್ರಮ ಸಂಘಟನೆಯಲ್ಲಿ ಪ್ರೀತಮ್ ಅವರು ತೊಡಗಿಸಿಕೊಂಡಿದ್ದರು. ರೋಟರಿ ಕ್ಲಬ್ ಆಫ್ ಕಾರವಾರ ಪಶ್ಚಿಮ ವಿಭಾಗದ ಪದಾಧಿಕಾರಿಗಳಾದ ಧರ್ಮೇಶ್, ದಿನೇಶ್, ಲಕ್ಷ್ಮೀಕಾಂತ್, ಡೆಮಿ, ಪ್ರಜ್ಞಾ, ರಾಜು ಪಾಟೀಲ್, ಮಹಬೂಬ್, ಅರವಿಂದ್, ಜಿತೇಂದ್ರ ಹಾಗೂ ನಿತಿನ್ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು. ಸಮಾಜಮುಖಿ ಕಾರ್ಯಗಳ ಮೂಲಕ ಆರೋಗ್ಯ ಕ್ಷೇತ್ರಕ್ಕೆ ನೆರವು ನೀಡುತ್ತಿರುವ ಕ್ಲಬ್‌ನ ಈ ಪ್ರಯತ್ನವನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.