ಕಾರವಾರ ನೌಕಾನೆಲೆಯಲ್ಲಿ ಉದ್ಯೋಗ ಮಾಡುತ್ತಿದ್ದ ಮೋಹನ ತಾಂಡೇಲ್ ಅವರು ದಿಢೀರ್ ಆಗಿ ಸಾವನಪ್ಪಿದ್ದಾರೆ. ಹೃದಯ ಆಘಾತದಿಂದ ಅವರು ಕೊನೆಯುಸಿರೆಳೆದ ಬಗ್ಗೆ ಅಂದಾಜಿಸಲಾಗಿದೆ.
ಕಾರವಾರದ ಚಿತ್ತಾಕುಲದ ಸೀಬರ್ಡ ಕಾಲೋನಿಯಲ್ಲಿ ಮೋಹನ ಪಾಂಡು ತಾಂಡೇಲ್ (57) ಅವರು ವಾಸವಾಗಿದ್ದರು. ನೌಕಾನೆಲೆಯಲ್ಲಿ ಅವರು ಸಾರಂಗ ಆಫ್ ಲಾಸ್ಕರ್ ಎಂಬ ಹುದ್ದೆಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಎಲ್ಲರ ಜೊತೆ ಸಹಜವಾಗಿದ್ದ ಅವರು ಮಾರ್ಚ 4ರಂದು ಮನೆಯಲ್ಲಿಯೇ ಇದ್ದರು.
ಆ ದಿನ ಮಧ್ಯಾಹ್ನ ಸ್ನಾನಕ್ಕೆ ಹೋಗಿದ್ದ ಮೋಹನ ತಾಂಡೇಲ್ ಅವರು ಸ್ನಾನ ಮುಗಿಸಿ ಬಂದು ಕೂತಿದ್ದರು. ಅಲ್ಲಿಯೇ ಅವರು ಎಚ್ಚರ ತಪ್ಪಿದ್ದು, ಮೋಹನ ತಾಂಡೇಲ್ ಅವರ ಸಹೋದರ ದಯಾನಂದ ಪಾಂಡು ತಾಂಡೇಲ್ ಅವರು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ವೈದ್ಯರು ಮೋಹನ ತಾಂಡೇಲ್ ಅವರ ಸಾವನ್ನು ಖಚಿತಪಡಿಸಿದರು. ಹೃದಯಘಾತದಿಂದ ಅವರು ಸಾವನಪ್ಪಿದ ಅನುಮಾನವ್ಯಕ್ತವಾಗಿದೆ. ಚಿತ್ತಾಕುಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
`ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಹೃದಯದ ಆರೋಗ್ಯ ಸದಾ ಗಮನಿಸಿ’