ಶಿರಸಿಯ ಸೆಂಟ್ ಮಿಲಾಗ್ರಿಸ್ ಬ್ಯಾಂಕ್ ಎದುರು ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಅಣ್ಣಪ್ಪ ಇಳಸೂರು ಅವರು ಬೈಕ್ ಕಳೆದುಕೊಂಡಿದ್ದಾರೆ.
ಶಿರಸಿ-ಹುಬ್ಬಳ್ಳಿ ರಸ್ತೆಯ ಮಾರಿಗುಡಿ ಕ್ರಾಸಿನ ಸೆಂಟ್ ಮಿಲಾಗ್ರಿಸ್ ಬ್ಯಾಂಕ್ ಎದುರು ಅಣ್ಣಪ್ಪ ಸುಬ್ರಾಯ ಇಳಸೂರು ಅವರು ವಾಸವಾಗಿದ್ದಾರೆ. ಸೈಕಲ್ ರಿಪೇರಿ ಮಾಡಿಕೊಂಡು ಅವರು ಬದುಕು ನಡೆಸುತ್ತಿದ್ದಾರೆ. ತಮ್ಮ ಮನೆ ಎದುರು ನಿಲ್ಲಿಸಿದ ಬೈಕನ್ನು ಅವರು ಕಳೆದುಕೊಂಡಿದ್ದಾರೆ. ಫೆಬ್ರವರಿ 24ರ ಮಧ್ಯಾಹ್ನವೇ ಅವರ ಬೈಕ್ ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಿದರೂ ಸಿಗದ ಕಾರಣ ಅವರು ಪೊಲೀಸ್ ದೂರು ನೀಡಿದ್ದಾರೆ.
ಆ ದಿನ ಮಧ್ಯಾಹ್ನ 1ಗಂಟೆಯಿoದ 1.45ರ ಅವಧಿಯಲ್ಲಿ ಬೈಕ್ ಕಳ್ಳತನ ನಡೆದ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಕೆಎ 31 ಡಬ್ಲೂ 1956 ನೋಂದಣಿಯ ಬೈಕನ್ನು ಕಳ್ಳರು ಕದ್ದಿರುವುದಾಗಿ ಅವರು ಹೇಳಿದ್ದಾರೆ. `ಬೈಕನ್ನು ಎಲ್ಲಾ ಕಡೆ ಹುಡುಕಿದರೂ ಸಿಕ್ಕಿಲ್ಲ. ಹೀಗಾಗಿ ಕಳ್ಳರನ್ನು ಪತ್ತೆ ಮಾಡಿ, ಬೈಕನ್ನು ಹುಡುಕಿಕೊಡಿ’ ಎಂದು ಅವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಈ ಹಿನ್ನಲೆ ಶಿರಸಿ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಬೈಕಿನ ಹುಡುಕಾಟ ಶುರು ಮಾಡಿದ್ದಾರೆ.