ಅಂಕೋಲಾದ ಕೇಣಿ ವಾಣಿಜ್ಯ ಬಂದರು ವಿಷಯವಾಗಿ ಆ ಭಾಗದ ಜನ ಒಗ್ಗಟ್ಟಿನಿಂದ ಹೋರಾಟ ನಡೆಸಿದ್ದು, ಈ ಹೋರಾಟದಲ್ಲಿ ಇದೀಗ ಒಡಕು ಮೂಡಿದೆ. ಹಣಕಾಸು ವಿಷಯವಾಗಿ ಹೋರಾಟಗಾರರಲ್ಲಿ ಸಣ್ಣ ಪ್ರಮಾಣದಲ್ಲಿ ಮನಸ್ತಾಪ ಉಂಟಾಗಿದ್ದು, ಅದನ್ನು ಹೋರಾಟಗಾರರೊಬ್ಬರು ಬಹಿರಂಗವಾಗಿವ್ಯಕ್ತಪಡಿಸಿದ್ದಾರೆ.
`ಕೇಣಿಯಲ್ಲಿ ಉದ್ದೇಶಿತ ಖಾಸಗಿ ಗ್ರೀನಫೀಲ್ಡ್ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ವಿರೋಧಿ ಹೋರಾಟ ಸಮಿತಿಯವರು ಹಣಕಾಸಿನ ದುರುಪಯೋಗ ಮಾಡಿದ್ದಾರೆ. ಹೋರಾಟ ಸಮಿತಿಯ ಕೆಲವರು ಗುತ್ತಿಗೆ ಕಂಪನಿಯವರ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ಶಂಕೆಯಿದೆ’ ಎಂದು ಕೇಣಿ ಬಂದರು ವಿರೋಧಿ ಹೋರಾಟ ಸಮಿತಿಯ ಸದಸ್ಯ ರಾಜು ಹರಿಕಂತ್ರ ಅವರು ಆರೋಪಿಸಿದ್ದಾರೆ. ಜಿಲ್ಲಾ ಮೀನು ಮಾರಾಟ ಫೇಡರೇಶನ್ ಮಾಜಿ ನಿರ್ದೇಶಕರೂ ಆಗಿರುವ ಅವರು `ಕೇಣಿ ಬಂದರು ವಿರೋಧಿಸಿ ಕಳೆದ ಒಂದು ವರ್ಷದಿಂದ ಹೋರಾಟ ನಡೆಯುತ್ತಿದೆ. ಇದಕ್ಕಾಗಿ ಹೋರಾಟ ಸಮಿತಿಯನ್ನು ಸಹ ರಚಿಸಲಾಗಿದೆ. ಅನೇಕ ದಾನಿಗಳಿಂದ ಹೋರಾಟ ಸಮಿತಿಯವರು ಹಣಪಡೆದಿದ್ದು, ಪಡೆದ ಹಣದ ಬಗ್ಗೆ ಲೆಕ್ಕಾಚಾರ ನೀಡುತ್ತಿಲ್ಲ. ಖರ್ಚು-ವೆಚ್ಚದ ಬಗ್ಗೆ ಪ್ರಶ್ನಿಸಿದರೂ ಉದ್ದಟತನದ ಮಾತನಾಡುತ್ತಿದ್ದಾರೆ’ ಎಂದವರು ದೂರಿದ್ದಾರೆ.
`ಕೇಣಿಯಲ್ಲಿ ಬಂದರು ನಿರ್ಮಾಣದಿಂದ ಅಂಕೋಲಾ ತಾಲೂಕಿನ ಮೀನುಗಾರರಿಗೆ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರ ಜೊತೆ ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ತೊಂದರೆ ಆಗುತ್ತದೆ. ಮನೆ, ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಇದೇ ಆತಂಕದಿAದ ಅನೇಕರು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಮಾಹಿತಿಗಳ ಪ್ರಕಾರ ಪ್ರತಿ ಮನೆಯಿಂದ 2 ಸಾವಿರ ರೂಪಾಯಿಗಳಂತೆ 373 ಮನೆಗಳಿಂದ ಹಣ ಸಂಗ್ರಹಿಸಲಾಗಿದ್ದು, ಆ ಹಣದ ಲೆಕ್ಕಾಚಾರದ ಬಗ್ಗೆ ಯಾರೂ ಮಾಹಿತಿ ಕೊಡುತ್ತಿಲ್ಲ’ ಎಂದು ದೂರಿದರು. `ವಿವಿಧ ಉದ್ಯಮಿಗಳಿಂದ, ಸಂಘ ಸಂಸ್ಥೆಯವರಿAದ, ಮೀನುಗಾರರ ಫೆಡರೇಷನ್ ಹಾಗೂ ಮೀನುಗಾರರ ಯುನಿಯನ್ ಮೂಲಕವೂ 10 ಲಕ್ಷಕ್ಕೂ ಅಧಿಕ ಹಣ ಸಂಗ್ರಹಿಸಲಾಗಿದೆ. ಹೆಸರು ಹೇಳಲು ಇಚ್ಚಿಸದ ಉದ್ದಿಮೆದಾರರು ಲಕ್ಷಕ್ಕೂ ಅಧಿಕ ಹಣ ನೀಡಿದ್ದಾರೆ. ಹೀಗೆ ಸಂಗ್ರಹಿಸಿದ ಹಣ ಪ್ರಮುಖ ಹೋರಾಟಗಾರರ ಬಳಿಯಿದ್ದು, ಅದರ ಬಗ್ಗೆ ಅವರು ಮಾಹಿತಿ ನೀಡುತ್ತಿಲ್ಲ’ ಎಂದು ದೂರಿದರು.
`ಈ ಮಧ್ಯೆ ಹೋರಾಟ ಸಮಿತಿಯ ಮುಖಂಡರ ಜೊತೆ ಸಮಿತಿಯ ಸದಸ್ಯರಲ್ಲದ ಕೇಣಿ ಭಾಗದ ಸುಮಾರು 10 ರಿಂದ 15 ಯುವಕರು ಬಂದರು ಅಧ್ಯಯನ ಅಥವಾ ತರಬೇತಿ ಪ್ರವಾಸಕ್ಕೆಂದು ಗುಜರಾತ, ಕೇರಳ, ಮಹಾರಾಷ್ಟç ದೆಹಲಿ, ಬೆಂಗಳೂರು ಹೀಗೆ ಅನೇಕ ಕಡೆಗಳಲ್ಲಿ ಹೋಗಿ ಬಂದಿದ್ದು ಇವರ ಪ್ರವಾಸಕ್ಕಾಗಿ ರೈಲು, ವಿಮಾನ ಹಾಗೂ ಉಳಿದ ಖರ್ಚು ವೆಚ್ಚಗಳನ್ನು ನೋಡಿಕೊಂಡ ಉದ್ಯಮಿ ಅಥವಾ ಸಂಸ್ಥೆ ಯಾವುದು? ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅವರಿಗೆ ನೀಡಿದ ತರಬೇತಿಯ ಉದ್ದೇಶವಾದರೂ ಏನು? ಅಧ್ಯಯನ ಮಾಡಿ ಬಂದ ಮೇಲೆ ಈ ಕುರಿತು ಮಾಹಿತಿ ನೀಡಿದ್ದಾರೆಯೇ? ಎಂದು ಪ್ರಶ್ನಿಸಿದರು. `ಒಳ್ಳೆಯ ಉದ್ದೇಶದಿಂದ ಅದ್ಯಯನಕ್ಕೆ ಹೊರಟಿದ್ದರೆ ಹೋರಾಟದಲ್ಲಿ ಪಾಲ್ಗೊಂಡ ಎಲ್ಲ ಸಮಾಜದವರನ್ನೂ ಯಾಕೆ ಕರೆದೊಯ್ಯಲಿಲ್ಲ? ಎಂದು ರಾಜು ಹರಿಕಂತ್ರ ಅವರು ಕೇಳಿದ್ದಾರೆ. `ಈ ಎಲ್ಲ ಗುಪ್ತ ವಿದ್ಯಮಾನಗಳನ್ನು ನೋಡಿದರೆ ಬಂದರು ವಿರೋಧಿ ಹೋರಾಟ ಸಮಿತಿಯ ಪ್ರಮುಖರು ಹಾಗೂ ಇನ್ನಿತರ ಕೆಲವರು ಸೇರಿ ಗುತ್ತಿಗೆ ಕಂಪನಿಗಳ ಜೊತೆ ಒಳ ಒಪ್ಪಂದ ಮಾಡಿಕೊಂಡು ಜೆಎಸ್‌ಡಬ್ಲೂö್ಯ ಕಂಪನಿಯವರೊAದಿಗೆ ಕೋಟಿಗಟ್ಟಲೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಯೇ? ಎನ್ನುವ ಸಂಶಯ ಮೂಡುತ್ತಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಹೋರಾಟ ಸಮಿತಿಯ ಪ್ರಮುಖರು ಅಂಕೋಲಾ ಪಟ್ಟದಲ್ಲಿ ಮನೆ, ಜಮೀನು ಖರೀದಿಸಲು ಹುಡುಕಾಟ ನಡೆಸಿದ್ದಾರೆ’ ಎಂಬ ವಿಷಯವನ್ನು ಬಹಿರಂಗಪಡಿಸಿದರು.
`ಈ ಹಿಂದೆ ಶಾಸಕರಾದ ಸತೀಶ ಸೈಲ್ ಅವರು ಬಹಿರಂಗ ಸಭೆಯೊಂದರಲ್ಲಿ ಕೇಣಿ ಭಾಗದ ಹೋರಾಟಗಾರರಲ್ಲಿ ಕೆಲವರು ಕಂಪನಿಯಿAದ ಹಣ ಪಡೆದಿರುವ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದರು. ಆದರೆ ಅಂದು ನಾವು ಸತ್ಯಕ್ಕೆ ದೂರವಾದ ಸಂಗತಿ ಎಂದೇ ನಂಬಿದ್ದೆವು. ಆದರೆ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ಶಾಸಕರ ಮಾತು ಸತ್ಯ ಎನಿಸುತ್ತಿದೆ’ ಎಂದವರು ಹೇಳಿದರು.