ಲೈಸನ್ಸ್ ಸಹ ಇಲ್ಲದ ವಿದ್ಯಾರ್ಥಿಯೊಬ್ಬ ತಲೆಗೆ ಹೆಲ್ಮೆಟ್ ಸಹ ಧರಿಸದೇ ರಾತ್ರಿ ವೇಳೆ ವೇಗವಾಗಿ ಬೈಕ್ ಓಡಿಸಿದ್ದು, ಆ ಬೈಕು ಹಳಿಯಾಳ-ದಾಂಡೇಲಿ ರಸ್ತೆಯಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತದ ರಭಸಕ್ಕೆ ಆ ವಿದ್ಯಾರ್ಥಿಯ ಬದುಕು ಅಂತ್ಯವಾಗಿದೆ.
ಹಳಿಯಾಳದ ಕಾನ್ವಿಂಟ್ ರಸ್ತೆಯ ಮೆರಿಯಾನ್ ಎಂ ಲೂಯಿಸ್ ಅವರು ತಮ್ಮ ಪುತ್ರ ಜಾನ್‌ವಿಯಾನಿ ಜೇಮ್ಸ ಡಿಸೋಜಾ ಅವರನ್ನು ಅತ್ಯಂತ ಪ್ರೀತಿಯಿಂದ ಬೆಳೆಸಿದ್ದರು. 17 ವರ್ಷದ ಜಾನ್‌ವಿಯಾನಿ ಜೇಮ್ಸ ಡಿಸೋಜಾ ಅವರ ಬಳಿ ವಾಹನ ಪರವಾನಿಗೆ ಇಲ್ಲದಿದ್ದರೂ ಅವರಿಗೆ ಬೈಕ್ ಓಡಿಸಲು ಬಿಟ್ಟಿದ್ದರು. ಬೈಕ್ ಓಡಿಸುವ ಹುಮ್ಮಸ್ಸಿನಲ್ಲಿದ್ದ ಜೇಮ್ಸ್ ಡಿಸೋಜಾ ಕಾನೂನಿಗೆ ಬೆಲೆ ಕೊಡುತ್ತಿರಲಿಲ್ಲ. ಸಂಚಾರಿ ನಿಯಮವನ್ನು ಸಹ ಪಾಲಿಸುತ್ತಿರಲಿಲ್ಲ.
ಏಪ್ರಿಲ್ 4ರಂದು ರಾತ್ರಿ ಹಳಿಯಾಳದ ಸೆಂಟ್ ಮಿಲಾಗ್ರಿಸ್ ಚರ್ಚಿನಲ್ಲಿ ಮೆರಿಯಾನ್ ಎಂ ಲೂಯಿಸ್ ಅವರ ಕುಟುಂಬದವರೆಲ್ಲರೂ ಈಸ್ಟರ್ ಹಬ್ಬದ ಆಚರಣೆಯಲ್ಲಿದ್ದರು. ಆ ರಾತ್ರಿ 2 ಗಂಟೆಗೆ ಜಾನ್‌ವಿಯಾನಿ ಜೇಮ್ಸ ಡಿಸೋಜಾ ಅವರು ಅಲ್ಲಿಂದ ಹೊರಟರು. ಎಂದಿನAತೆ ವೇಗವಾಗಿ ಬೈಕ್ ಓಡಿಸಿಕೊಂಡು ಹೊರಟ ಜಾನ್‌ವಿಯಾನಿ ಅವರು ಹಳಿಯಾಳ-ದಾಂಡೇಲಿ ರಸ್ತೆ ಮಾರ್ಗವಾಗಿ ಸಂಚರಿಸಿದರು. ಅಜಗಾಂವಿನ ಬಳಿ ಅವರ ಬೈಕು ಅಪಘಾತಕ್ಕೀಡಾಗಿದ್ದು, ಜಾನ್‌ವಿಯಾನಿ ಅವರು ರಸ್ತೆ ಪಕ್ಕದ ಕಬ್ಬಿನ ಗದ್ದೆಗೆ ಹೋಗಿ ಬಿದ್ದರು. ಬೈಕ್ ಅಪಘಾತದ ರಭಸಕ್ಕೆ ಅವರ ತಲೆಗೆ ಭಾರೀ ಪ್ರಮಾಣದ ಪೆಟ್ಟಾಯಿತು.
ಅಜಗಾಂವಿನ ಹರಿದಾಸ ಶಿಂಧೆ ಅವರ ಕಬ್ಬಿನ ಗದ್ದೆಯಲ್ಲಿ ಬಿದ್ದಿದ್ದ ಜಾನ್‌ವಿಯಾನಿ ಅವರ ಕೂಗು ಯಾರಿಗೂ ಕೇಳಲಿಲ್ಲ. ಅಪಘಾತದಲ್ಲಿ ಅವರು ಗಾಯಗೊಂಡಿದ್ದರಿAದ ಆಸ್ಪತ್ರೆಗೆ ಹೋಗುವಷ್ಟು ತ್ರಾಣವೂ ಇರಲಿಲ್ಲ. ಅಲ್ಲಿಯೇ ಅವರು ನರಳಾಟ ನಡೆಸಿ ಸಾವನಪ್ಪಿದರು. ಏಪ್ರಿಲ್ 5ರ ಬೆಳಗ್ಗೆ ಮೆರಿಯಾನ್ ಎಂ ಲೂಯಿಸ್ ಅವರಿಗೆ ಕುಟುಂಬದವರ ಫೋನ್ ಬಂದಿದ್ದು, ಜಾನ್‌ವಿಯಾನಿ ಅವರ ಬೈಕು ಅಪಘಾತಕ್ಕೀಡಾಗಿರುವ ಮಾಹಿತಿ ಸಿಕ್ಕಿತು. ಕೂಡಲೇ ಮೆರಿಯಾನ್ ಎಂ ಲೂಯಿಸ್ ಅವರು ಸ್ಥಳಕ್ಕೆ ಹೋಗಿ ನೋಡಿದರು. ಅಷ್ಟರಲ್ಲಿ ಜಾನ್‌ವಿಯಾನಿ ಅವರು ಸಾವನಪ್ಪಿದ್ದರು.
ಕಬ್ಬಿನ ಗದ್ದೆ ಮಾಲಕರಾದ ಅಜಗಾಂವಿನ ಹರಿದಾಸ ಶಿಂಧೆ ಅವರಲ್ಲಿ ವಿಚಾರಿಸಿದಾಗ ಬೆಳಗ್ಗೆ 9 ಗಂಟೆಯ ವೇಳೆಗೆ ಶವ ನೋಡಿರುವುದಾಗಿ ತಿಳಿಸಿದರು. ಹಳಿಯಾಳದಿಂದ ದಾಂಡೇಲಿ ಕಡೆ ವೇಗವಾಗಿ ಬೈಕ್ ಓಡಿಸಿಕೊಂಡು ಹೊರಟಿದ್ದ ಜಾನ್‌ವಿಯಾನಿ ಜೇಮ್ಸ ಡಿಸೋಜಾ ಅವರು ಅಪಘಾತದಲ್ಲಿ ಸಾವನಪ್ಪಿದ ಬಗ್ಗೆ ಮೆರಿಯಾನ್ ಎಂ ಲೂಯಿಸ್ ಅವರು ಪೊಲೀಸರಿಗೆ ತಿಳಿಸಿದ್ದು, ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಕಾನೂನು ಕ್ರಮ ಜರುಗಿಸಿದರು.